ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: 2ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಘಟಾನುಘಟಿಗಳಿವರು

Published 25 ಏಪ್ರಿಲ್ 2024, 12:01 IST
Last Updated 25 ಏಪ್ರಿಲ್ 2024, 12:01 IST
ಅಕ್ಷರ ಗಾತ್ರ

ನವದೆಹಲಿ: ಲೋಸಕಭಾ ಚುನಾವಣೆಯಲ್ಲಿ ಏ. 26ರಂದು ನಡೆಯಲಿರುವ 2ನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಹೇಮಾ ಮಾಲಿನಿ, ಓಂ ಬಿರ್ಲಾ ಹಾಗೂ ನಟ ಅರುಣ್ ಗೋವಿಲ್ ಸೇರಿದಂತೆ ಹಲವು ಪ್ರಮುಖರ ಚುನಾವಣಾ ಭವಿಷ್ಯ ದಾಖಲಾಗಲಿದೆ. 

ಈ ಬಾರಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ 102 ಕ್ಷೇತ್ರಗಳಿಗೆ ಮತದಾನ ಕಳೆದ ಶುಕ್ರವಾರ ನಡೆಯಿತು. ಇಲ್ಲಿ ಒಟ್ಟು ಶೇ 65.5ರಷ್ಟು ಮತದಾನವಾಗಿತ್ತು.

2ನೇ ಹಂತದ ಮತದಾನ ಈ ಶುಕ್ರವಾರ (ಏ. 26) ನಡೆಯಲಿದೆ. ಇದರಲ್ಲಿ ಕೇರಳದ 20 ಕ್ಷೇತ್ರ, ಕರ್ನಾಟಕದ 14, ರಾಜಸ್ಥಾನದ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ 8 ಹಾಗೂ ಮಧ್ಯಪ್ರದೇಶದ 7, ಅಸ್ಸಾಂ ಮತ್ತು ಬಿಹಾರದ ತಲಾ 5, ಛತ್ತೀಸಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ಮಣಿಪುರ, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರದ ತಲಾ ಒಂದು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಕೇರಳದ ವಯನಾಡ್‌ ಕ್ಷೇತ್ರದ ಸಂಸದರಾಗಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿ ಇದೇ ಕ್ಷೇತ್ರದಿಂದ ಮತ್ತೊಂದು ಬಾರಿ ಅಯ್ಕೆ ಬಯಸಿ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಸಿಪಿಐನ ಅನ್ನೀ ರಾಜ ಹಾಗೂ ಬಿಜೆಪಿಯಿಂದ ಕೆ.ಸುರೇಂದ್ರನ್ ಸ್ಪರ್ಧಿಸಿದ್ದಾರೆ. 2019ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ 7 ಲಕ್ಷ ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಪಿ.ಪಿ.ಸುನೀರ್ ಅವರ ವಿರುದ್ಧ ಜಯ ಗಳಿಸಿದ್ದರು.

ಶಶಿ ತರೂರ್‌ 4ನೇ ಬಾರಿ ಸ್ಪರ್ಧೆ

ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರು ತಿರುವನಂತಪುರ ಕ್ಷೇತ್ರದಿಂದ 4ನೇ ಬಾರಿ ಸ್ಪರ್ಧಿಸಿದ್ದಾರೆ. ಇವರು ಕೇಂದ್ರ ಸಚಿವ, ಬಿಜೆಪಿಯ ರಾಜೀವ್ ಚಂದ್ರಶೇಖರ ಹಾಗೂ ಸಿಪಿಐನ ಪನ್ನಯನ್ ರವೀಂದ್ರನ್ ಅವರನ್ನು ಎದುರಿಸುತ್ತಿದ್ದಾರೆ.

ಬೆಂಗಳೂರು ದಕ್ಷಿಣದಿಂದ ಬಿಜೆಪಿಯ ತೇಜಸ್ವಿ ಸೂರ್ಯ ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ. ಇವರ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಸ್ಪರ್ಧಿಸಿದ್ದಾರೆ. 

2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನಟಿ ಹೇಮಾ ಮಾಲಿನಿ ಅವರ ವಿರುದ್ಧ ಕಾಂಗ್ರೆಸ್‌ನ ಮುಖೇಶ್ ಧಂಗರ್ ಕಣದಲ್ಲಿದ್ದಾರೆ. ರಾಜಸ್ಥಾನದ ಕೋಟಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿರುವ ಬಿಜೆಪಿಯ ಓಂ ಬಿರ್ಲಾ ಅವರು ಈ ಬಾರಿಯೂ ಸ್ಪರ್ಧಿಸಿದ್ದು, ಇವರ ವಿರುದ್ಧ ಕಾಂಗ್ರೆಸ್‌ನ ಪ್ರಹ್ಲಾದ್ ಗುಂಜಾಲ್ ಕಣದಲ್ಲಿದ್ದಾರೆ.

ಕೇಂದ್ರ ಸಚಿವ ಶೇಖಾವತ್ ಅವರು ಮೂರನೇ ಬಾರಿ ಸಂಸದರಾಗಲು ಬಯಸಿ ಜೋಧಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರು ರಾಜಂದಗಾಂವ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಳೆದ 30 ವರ್ಷಗಳಿಂದ ಇದು ಬಿಜೆಪಿಯ ಭದ್ರಕೋಟೆಯಾಗಿದೆ.

ರಾಮನ ಪಾತ್ರಧಾರಿ ಅರುಣ ಗೋವಿಲ್ ಮೀರತ್‌ನಿಂದ ಸ್ಪರ್ಧೆ

ನಟಿ, ಕಾಂಗ್ರೆಸ್‌ನ ನೇಹಾ ಶರ್ಮಾ ಅವರು ತಮ್ಮ ಚೊಚ್ಚಲ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಮೂರು ಬಾರಿ ಸಂಸದರಾಗಿದ್ದ ರಾಜೇಂದ್ರ ಅಗರ್ವಾಲ್ ಅವರ ಬದಲು ನೇಹಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಟಿ.ವಿ. ಧಾರಾವಾಹಿ ರಾಮಾಯಣದ ರಾಮನ ಪಾತ್ರಧಾರಿ ಅರುಣ ಗೋವಿಲ್ ಅವರು ಬಿಜೆಪಿಯಿಂದ ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರು ಸಮಾಜವಾದಿ ಪಾರ್ಟಿಯ ಸುನೀತಾ ವರ್ಮಾ ಅವರನ್ನು ಎದುರಿಸುತ್ತಿದ್ದಾರೆ.

ಮಧ್ಯಪ್ರದೇಶದ ತಿಕ್ಮಾಗ್ರಾ ಕ್ಷೇತ್ರದಿಂದ ಬಿಜೆಪಿ ಮುಖಂಡ ವೀರೇಂದ್ರ ಕುಮಾರ್ ಖಾತಿಕ್ ಅವರು ನಾಲ್ಕನೇ ಬಾರಿ ಕಣಕ್ಕಿಳಿದಿದ್ದಾರೆ. ಕೇರಳದ ಅಲಪ್ಪುಳಾ ಕ್ಷೇತ್ರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸ್ಪರ್ಧಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT