‘ಜೋಶಿಗಷ್ಟೇ ಸಂಪುಟ ದರ್ಜೆ ಸ್ಥಾನಮಾನ ಏಕೆ?’
‘ಕೇಂದ್ರ ಸಚಿವ ಸಂಪುಟದಲ್ಲಿ ದಲಿತ ಸಮುದಾಯದ ಎ. ನಾರಾಯಣಸ್ವಾಮಿ, ಒಕ್ಕಲಿಗರಾದ ಶೋಭಾ ಕರಂದ್ಲಾಜೆ, ಲಿಂಗಾಯತ ಸಮುದಾಯದ ಭಗವಂತ ಖೂಬಾ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಿ, ಪ್ರಲ್ಹಾದ ಜೋಶಿ ಅವರಿಗೆ ಮಾತ್ರ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದು ಏಕೆ? ಕೇಂದ್ರದ ಮಟ್ಟದಲ್ಲಿ ಜೋಶಿ ಅವರೇ ಕರ್ನಾಟಕದ ಪ್ರತಿನಿಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಕರ್ನಾಟಕದಲ್ಲಿ 25 ಸೀಟುಗಳನ್ನು ಗೆದ್ದಿರುವ ಬಿಜೆಪಿಯ ನಾಯಕತ್ವ ಎತ್ತ ಸಾಗುತ್ತಿದೆ ಎಂಬುದಕ್ಕೆ ಇದು ದೊಡ್ಡ ಸಂದೇಶವಾಗಿದೆ. ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದಿರುವವರಿಗೆ ಜೀ ಹುಜೂರ್ ಎನ್ನುವ ಶಾಸಕರು ಬೇಕೇ ಹೊರತು, ಸಮುದಾಯದ ನಾಯಕರು ಬೇಕಿಲ್ಲ’ ಎಂದು ಜಗದೀಶ ಶೆಟ್ಟರ್ ಹರಿಹಾಯ್ದರು. ಮಾಜಿ ಸಂಸದ ಮಂಜುನಾಥ ಕುನ್ನೂರು ಇದ್ದರು.