ಚಿಕ್ಕಮಗಳೂರು: ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ವೈಎಸ್ವಿ ದತ್ತ ಅವರು ಮುಂದಿನ ನಡೆ ಕುರಿತು ಚರ್ಚಿಸಲು ಇದೇ 9ರಂದು ಕಡೂರಿನಲ್ಲಿ ಅಭಿಮಾನಿಗಳ ಸಭೆ ಏರ್ಪಡಿಸಿದ್ದಾರೆ.

ಬೆಳ್ಳಿಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪತ್ರದ ಮೂಲಕ ಕೋರಿದ್ದಾರೆ. ಪತ್ರದ ಸಾರಾಂಶ ಇಂತಿದೆ.

‘ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ, ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ‘ದತ್ತಣ್ಣ ನಮ್ಮ ದತ್ತಣ್ಣ’ ಎಮದು ಅಭಿಮಾನದಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ‘ನಿಮ್ಮ ಜೊತೆಗೇ ನಾನಿರಬೇಕು, ನನ್ನ ಜೊತೆಗೇ ನೀವಿರಬೇಕು’ ಎಂಬುದು ಅನಿವಾರ್ಯವಾಗಿದೆ.

ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅವಮಾನವಾಗಿದೆ.

ಈ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ, ನಾನು ನಿಮ್ಮೆಲ್ಲರ ಆಶೀರ್ವಾದವನ್ನು ಬೇಡಲು ಕಡೂರು ಪಟ್ಟಣದಲ್ಲಿ 9ರಂದು ಬೆಳಿಗ್ಗೆ 11ಕ್ಕೆ ನನ್ನ ಅಭಿಮಾನಿಗಳ ಸಭೆ ಕರೆದಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹರಸಿ ಆಶೀರ್ವದಿಸಬೇಕು’ ಎಂದು ಅವರು ಕೋರಿದ್ದಾರೆ.

ಇವನ್ನೂ ಓದಿ...

* ಇಂಟರ್ನ್ಯಾಷನಲ್ ಪಕ್ಷ ಸೇರಲು ಹೋದವರು ವೈಎಸ್ವಿ ದತ್ತ: ಎಚ್ಡಿಕೆ ವ್ಯಂಗ್ಯ

* ಕಡೂರು ಕ್ಷೇತ್ರ: ಡಿಕೆಶಿ ಜೊತೆಗಿನ ಒಳಮುನಿಸು ದತ್ತಗೆ ಮುಳುವಾಯಿತೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.