ಸದ್ಯ, ಕಾಂಗ್ರೆಸ್–ಬಿಜೆಪಿ ನಾಯಕರಲ್ಲಿ ಸಣ್ಣ ಬೇಸರ, ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿಯೂ ಒಂದು ರೀತಿಯ ಮುಜುಗರವನ್ನು ಕಾಣುತ್ತಲೇ , ಮಹತ್ತರ ರಾಜಕೀಯ ಬದಲಾವಣೆಗೆ ಎದುರುಗೊಳ್ಳುತ್ತಿದೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರ.

ಯಾವುದೇ ಅಚ್ಚರಿದಾಯಕ ಫಲಿತಾಂಶ ಬರಲಿಕ್ಕಿಲ್ಲ ಎಂಬಂತಿದ್ದ ಇದು, ಈಗ ರಾಜ್ಯದಲ್ಲೇ ಹೆಚ್ಚು ಗಮನ ಸೆಳೆದಿರುವ ಕ್ಷೇತ್ರಗಳಲ್ಲೊಂದು. ಇದಕ್ಕೆ ಕಾರಣ, ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರಿರುವುದು. ಇದೇ ವಿಷಯದ ಬಗ್ಗೆ ಕ್ಷೇತ್ರದಲ್ಲೀಗ ಪರ–ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಅದರೊಂದಿಗೆ, ಇಷ್ಟು ದಿನ ಶೆಟ್ಟರ್ ಅವರು ಪಡೆಯುತ್ತಿದ್ದ ಮತಗಳು ನಿಜಕ್ಕೂ ಅವರವೇ ಆಗಿದ್ದವೇ ಅಥವಾ ಪಕ್ಷದ್ದು ಮಾತ್ರವೇ ಎಂಬಂತಹ ಅನೇಕ ಪ್ರಶ್ನೆಗಳಿಗೂ ಮೇ 13ರಂದು ಉತ್ತರ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.