ಬಾಲಿವುಡ್ನಲ್ಲಿ ವಿವಾದಗಳು ಹೊಸದೇನಲ್ಲ. ಆದರೂ,2021ರಲ್ಲಿ ಮುನ್ನೆಲೆಗೆ ಬಂದ ಕೆಲ ವಿವಾದಗಳುಬಾಲಿವುಡ್ ಅನ್ನು ಬೆಚ್ಚಿಬೀಳುವಂತೆ ಮಾಡಿದವು.

ವೆಬ್ ಕಂಟೆಂಟ್ನಿಂದ ಹಿಡಿದು, ಶಾರುಕ್ ಖಾನ್ಮಗ ಆರ್ಯನ್ಬಂಧನದವರೆಗಿನ ವಿವಾದಗಳು ದೇಶದಾದ್ಯಂತ ಕಲ್ಲೋಲ ಸೃಷ್ಟಿಸಿದವು. ಇಂತಹ ಐದು ವಿವಾದಗಳ ಬಗೆಗಿನಲಘು ಟಿಪ್ಪಣಿ ಇಲ್ಲಿದೆ...

1– ಡ್ರಗ್ಸ್ ಪ್ರಕರಣದಲ್ಲಿ ಶಾರುಕ್ ಮಗಆರ್ಯನ್ ಖಾನ್ ಬಂಧನ

ಮುಂಬೈ ಕರಾವಳಿಯಲ್ಲಿ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ ನಂತರ ಅಕ್ಟೋಬರ್ 3 ರಂದು ಆರ್ಯನ್ ಖಾನ್ ಅವರನ್ನು ಎನ್ಸಿಬಿ ಬಂಧಿಸಿತ್ತು.22 ದಿನಗಳ ಬಳಿಕ,ಅಕ್ಟೋಬರ್ 30ರಂದು ಬಾಂಬೆಹೈಕೋರ್ಟ್ ಆರ್ಯನ್ ಅವರಿಗೆಷರತ್ತುಬದ್ಧಜಾಮೀನು ಮಂಜೂರುಮಾಡಿತು.

2–ನಟ ಸೋನು ಸೂದ್ ಮನೆಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ನಟ ಸೋನು ಸೂದ್ ಅವರ ಮುಂಬೈ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಲಖನೌ ಕಂಪನಿಗಳಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸೆ.15ರಂದುತಪಾಸಣೆ ನಡೆಸಿದ್ದರು.

3–ಹಣ ಅಕ್ರಮ ವರ್ಗಾವಣೆ:ನಟಿ ಜಾಕ್ವೆಲಿನ್ ಫರ್ನಾಂಡಿಸ್ವಿಚಾರಣೆ

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಡಿ.05ರಂದುಲುಕ್ ಔಟ್ ನೊಟೀಸ್ ನೀಡಿತ್ತು.

4–ಅಶ್ಲೀಲ ಚಿತ್ರ ನಿರ್ಮಾಣ: ಉದ್ಯಮಿ ರಾಜ್ ಕುಂದ್ರಾ ಬಂಧನ

ಅಶ್ಲೀಲ ಚಿತ್ರ ನಿರ್ಮಾಣ ಮತ್ತು ಕೆಲವು ಆ್ಯಪ್ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಬಂಧಿಸಲಾಗಿತ್ತು.ಸೆಪ್ಟೆಂಬರ್ನಲ್ಲಿ ಅವರಿಗೆ ಜಾಮೀನು ನೀಡಲಾಗಿದೆ.

5– ಹಿಂದೂ ದೇವತೆಗಳಿಗೆಅವಮಾನ: ತಾಂಡವ್ ಚಿತ್ರದ ವಿರುದ್ಧ ಪ್ರತಿಭಟನೆ

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡಿರುವ ಆರೋಪದಡಿ ‘ತಾಂಡವ್‘ಚಿತ್ರದ ವಿರುದ್ಧ ದೇಶದ ವಿವಿಧೆಡೆಪ್ರತಿಭಟನೆ ನಡೆಸಲಾಯಿತು. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಚಿತ್ರ ನಿರ್ಮಾಪಕರವಿರುದ್ಧ ಎಫ್ಐಆರ್ ದಾಖಲಾಗಿದ್ದವು. ಈ ಚಿತ್ರದಲ್ಲಿಸೈಫ್ ಅಲಿ ಖಾನ್ ಹಾಗೂ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.