ಮುಂಬೈ: ಅಮಿತ್ ರೈ ನಿರ್ದೇಶನದ, ಅಕ್ಷಯ್ ಕುಮಾರ್ ನಟನೆಯ ‘ಓ ಮೈ ಗಾಡ್–2’ ಚಿತ್ರ ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿದೆ.

ಓ ಮೈ ಗಾಡ್–2ಗೆ ಸೆನ್ಸಾರ್ ಮಂಡಳಿ ಎ ಪ್ರಮಾಣಪತ್ರ ನೀಡಿದ್ದು, 12 ವರ್ಷಗಳ ಬಳಿಕ ಅಕ್ಷಯ ಕುಮಾರ್ ಅವರ ಚಿತ್ರವೊಂದಕ್ಕೆ ಎ ಪ್ರಮಾಣಪತ್ರ ದೊರಕಿದೆ ಎಂದು ಹೇಳಲಾಗಿದೆ.

2011ರಲ್ಲಿ ಅಕ್ಷಯ್ ಅವರ ದೇಸಿ ಬಾಯ್ಸ್ ಚಿತ್ರಕ್ಕೆ ಎ ಪ್ರಮಾಣಪತ್ರ ದೊರಕಿತ್ತು.

ಈ ಕುರಿತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.

ಚಿತ್ರದಲ್ಲಿ ಹಲವು ದೃಶ್ಯಗಳು ಎಲ್ಲಾ ವಯಸ್ಸಿನವರು ನೋಡುವಂತಿಲ್ಲ, ಹೀಗಾಗಿ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (Central Board of Film Certification ) ಸೂಚಿಸಿತ್ತು. ಆದರೆ ನಿರ್ಮಾಪಕರು ಅದಕ್ಕೆ ಒಪ್ಪದ ಕಾರಣ ಚಿತ್ರದಲ್ಲಿ ಯಾವುದೇ ದೃಶ್ಯಗಳನ್ನು ಕಟ್ ಮಾಡಲಾಗಿಲ್ಲ. ಹೀಗಾಗಿ 18 ವರ್ಷ ಮೇಲ್ಪಟ್ಟವರು ಮಾತ್ರ ನೋಡುವಂತೆ ಎ ಪ್ರಮಾಣಪತ್ರ ನೀಡಿದೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಶಿವನ ಪಾತ್ರದಲ್ಲಿ ನಟಿಸಿದ್ದು, ಅದಕ್ಕೂ ಸಾಕಷ್ಟು ಆಕ್ಷೇಪ ಕೇಳಿಬಂದಿದೆ. ಚಿತ್ರದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿ ಹಲವು ತಾರೆಯರು ನಟಿಸಿದ್ದಾರೆ.

2012ರಲ್ಲಿ ಓ ಮೈ ಗಾಡ್ ಚಿತ್ರ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.