ಮುಂಬೈ: ಅಮೀರ್ ಖಾನ್ ಅಭಿನಯದ ’ಲಾಲ್ ಸಿಂಗ್ ಚಡ್ಡಾ‘ ಇಂದು (ಆ.11) ಬಿಡುಗಡೆಯಾಗಿದ್ದು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾ ಹಾಗೂ ಅಮೀರ್ ಖಾನ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಟ್ವಿಟ್ಟರ್ನಲ್ಲಿ ಬಾಯ್ಕಾಟ್ (#BoycottLaalSinghChaddha) ಅಭಿನಯದ ನಡುವೆ ಚಿತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿವೆ. ಈ ಸಿನಿಮಾದಲ್ಲಿ ಮೂರು ವಿಭಿನ್ನ ಶೇಡ್ಗಳಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬರೋಬ್ಬರಿ 4 ವರ್ಷಗಳ ಅಭಿಮಾನಿಗಳು ಅಮೀರ್ ಖಾನ್ ಅವರನ್ನು ತೆರೆಯ ಮೇಲೆ ಕಣ್ತುಂಬಿಕೊಂಡಿದ್ದಾರೆ.

ಇದನ್ನು ಓದಿ:‘ಲಾಲ್ ಸಿಂಗ್ ಚಡ್ಡಾ’ ನಿರ್ಮಾಣಕ್ಕೆ 14 ವರ್ಷ: ಅಮೀರ್ ಖಾನ್ ಹೇಳಿದ್ದಿಷ್ಟು..

ಜರ್ನಿ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಮೀರ್ ಖಾನ್ ಸಾಧಾರಣ ವ್ಯಕ್ತಿ, ಸೈನಿಕ, ಸಾಧಕ…ಹೀಗೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ನಾನು ಸಿನಿಮಾವನ್ನು ನೋಡಿದ್ದು ನನ್ನ ವಿಮರ್ಶೆ 4/5! ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಹಣ ಕೊಟ್ಟು ಸಿನಿಮಾ ನೋಡಿದ್ದು ವೇಸ್ ಆಗಲಿಲ್ಲ. ಇದಕ್ಕೆ ಐಎಂಬಿಯಲ್ಲಿ ಟಾಪ್ ರೇಟ್ ಸಿಕ್ಕಿದೆ. ಇದು ಇಂಡಿಯಾದ ಕಾಮನ್ ಮ್ಯಾನ್ ಸಿನಿಮಾ ಎಂದು ಮನೋಜ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ದಯವಿಟ್ಟು ನನ್ನ ಚಿತ್ರ ನೋಡಿ: 'ಲಾಲ್ ಸಿಂಗ್ ಚಡ್ಡಾ’ ಬಹಿಷ್ಕಾರಕ್ಕೆ ಅಮೀರ್ ಅಳಲು

ಇದು ಸೂಪರ್ ಸಿನಿಮಾ ಎಂದು ಅಬ್ದುಲ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಈ ಸಿನಿಮಾ ಚೆನ್ನಾಗಿಲ್ಲ ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ. ಇದು ಫ್ಲಾಪ್ ಸಿನಿಮಾ ಎಂದು ಹೇಳಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ನಾಗ ಚೈತನ್ಯ ಮತ್ತು ಮೋನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. 1994 ರಲ್ಲಿ ತೆರೆಕಂಡ ಹಾಲಿವುಡ್ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದೆ.

ಇವುಗಳನ್ನೂ ಓದಿ

ಘೋಷಣೆ ಆಯ್ತು ಪುನೀತ್ ನಟನೆಯ ಕೊನೆಯ ಚಿತ್ರ ‘ಲಕ್ಕಿಮ್ಯಾನ್’ ರಿಲೀಸ್ ಡೇಟ್!

ಆರಾಮಾಗಿ ಇದ್ದೀನಿ.. ವೈರಲ್ ಆಯ್ತು ಪುನೀತ್ ರಾಜ್ಕುಮಾರ್ ಹಳೆಯ ಪೋಸ್ಟ್!

ಪುನೀತ್ ಮತ್ತೆ ಹುಟ್ಟಿ ಬರಲಿ: ದೇಗುಲದ ಹುಂಡಿಯಲ್ಲಿ ಅಭಿಮಾನಿಯ ಹರಕೆ ಚೀಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.