'ಪ್ಯಾನ್ ಇಂಡಿಯಾ' ಸಿನಿಮಾಗಳಾದ 'ಪುಷ್ಪಾ', 'ಆರ್ಆರ್ಆರ್' ಹಾಗೂ 'ಕೆಜಿಎಫ್–2', ಬಾಕ್ಸ್ ಆಫೀಸ್ನಲ್ಲಿ ಭಾರಿ ಗಳಿಕೆ ಕಂಡಿವೆ. ಇದೇವೇಳೆ ದಕ್ಷಿಣ ಭಾರತದ ಚಿತ್ರಗಳ ಯಶಸ್ಸಿನ ನಡುವೆ ಬಾಲಿವುಡ್ ಸಿನಿಮಾಗಳು ಹಿನ್ನಡೆ ಅನುಭವಿಸುತ್ತಿವೆಯೇ? ಬಾಲಿವುಡ್ನಲ್ಲಿ ಕಥೆ ಕೊರತೆ ಇದೆಯೇ? ಎಂಬ ಮಾತನ್ನು ನಟ ಅಭಿಷೇಕ್ ಬಚ್ಚನ್ ನಿರಾಕರಿಸಿದ್ದಾರೆ.

'ದಿ ಇಂಡಿಯನ್ ಎಕ್ಸ್ಪ್ರೆಸ್'ಗೆ ನೀಡಿರುವಸಂದರ್ಶನದಲ್ಲಿ ಕೆಜಿಎಫ್–2, ಪುಷ್ಪಾ ಮತ್ತು ಆರ್ಆರ್ಆರ್ ಸಿನಿಮಾಗಳ ಯಶಸ್ಸು ಮತ್ತುಹಿಂದಿ ಸಿನಿಮಾಗಳ ಬಗ್ಗೆ ಅಭಿಷೇಕ್ ಮಾತನಾಡಿದ್ದಾರೆ. ಈ ವೇಳೆ ಅವರು, ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುವಂತಹ ಕಥೆಗಳು ಇಲ್ಲ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಭಾಷೆಗಳು ಬೇರೆ ಇರಬಹುದು ಆದರೆ, ಉದ್ಯಮ ಒಂದೇ ಎಂದು ಹೇಳಿದ್ದಾರೆ.

ಮುಂದುವರಿದು, 'ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ರಿಮೇಕ್ ಆಗುತ್ತಿಲ್ಲ ಎಂದು ಹೇಳುವಿರಾ?. ಈಪ್ರಶ್ನೆಯೇ ಅನುಚಿತವಾಗುತ್ತದೆ. ಏಕೆಂದರೆ, ಇದಕ್ಕೆ ನೀವು ಏನೇ ಹೇಳಿದರೂ, ನಿಮ್ಮ ಉತ್ತರ ರಕ್ಷಣಾತ್ಮಕವಾಗಿಯೇ ಇರುತ್ತದೆ. ನಾವೆಲ್ಲರೂ ಭಾರತೀಯ ಸಿನಿಮಾ ಉದ್ಯಮದವರು' ಎಂದು ತಿಳಿಸಿದ್ದಾರೆ.

'ನಾವು ವಿವಿಧ ಭಾಷೆಗಳಲ್ಲಿ ಕೆಲಸ ಮಾಡುತ್ತಿರಬಹುದು. ಆದರೆ, ಒಂದೇ ಉದ್ಯಮದ ಭಾಗವಾಗಿದ್ದೇವೆ. ನಾವೆಲ್ಲರೂ ಒಂದೇ ಪ್ರೇಕ್ಷರಿಗೆ ಸಿನಿಮಾ ಮಾಡುತ್ತಿದ್ದೇವೆ. ಯಾವುದೇ ಸಿನಿಮೋದ್ಯಮಕ್ಕೆ ಹಣೆಪಟ್ಟಿ ಕಟ್ಟುವುದು ಸರಿಯಲ್ಲ. ಹಿಂದಿ ಅಥವಾ ಯಾವುದೇ ಭಾಷೆಯ ಸಿನಿಮಾಗಳಿರಲಿ, ರಿಮೇಕ್ ಆಗಿವೆ. ಇದೇನು ಹೊಸ ವಿದ್ಯಮಾನವಲ್ಲ. ಎಲ್ಲ ಕಾಲದಲ್ಲಿಯೂ 'ಕಥೆ' ವಿನಿಮಯ ನಡೆದಿದೆ. ಅದರಲ್ಲಿ ತಪ್ಪೇನೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಸದ್ಯ ಈ (ಕೆಜಿಎಫ್–2, ಪುಷ್ಪಾ, ಆರ್ಆರ್ಆರ್) ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ನೀವು ಹೀಗೆ ಕೇಳುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲೆ. ನಮ್ಮ ಸಿನಿಮಾಗಳೂ ದಕ್ಷಿಣದಲ್ಲಿ ಉತ್ತಮ ಪ್ರದರ್ಶನ ಕಂಡಿವೆ. ಇದೇನು ಹೊಸ ವಿಚಾರವಲ್ಲ. ನಾವು ದೊಡ್ಡ ಕುಟುಂಬದ ಭಾಗವಾಗಿದ್ದೇವೆ' ಎಂದೂ ಅಭಿಪ್ರಾಯಪಟ್ಟಿದ್ದಾರೆ.

ತೆಲುಗು ಸಿನಿಮಾಗಳಾದ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ', ಎಸ್ಎಸ್ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಹಾಗೂ ಯಶ್ ಅಭಿನಯದ ಕನ್ನಡದ ಸಿನಿಮಾ ಕೆಜಿಎಫ್–2 ದೇಶದಾದ್ಯಂತ ಉತ್ತಮ ಪ್ರದರ್ಶನ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.