‘ಟಗರು ಪಲ್ಯ’ ಬೆನ್ನಲ್ಲೇ ನಟ ನಾಗಭೂಷಣ್ ‘ವಿದ್ಯಾಪತಿ’ಯಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ. ‘ಇಕ್ಕಟ್’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್ ಹಾಗೂ ಹಸೀಂ ಖಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಚಿತ್ರದ ಹಾಡೊಂದಕ್ಕೆ ನಟ ಜಗ್ಗೇಶ್ ಧ್ವನಿಯಾಗಿದ್ದಾರೆ.

‘ಅಯ್ಯೋ ವಿಧಿಯೇ...’ ಎಂದು ಶುರುವಾಗುವ ಹಾಡಿನಲ್ಲಿ ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆಹರಟೆ ದೃಶ್ಯಗಳಿವೆ. ಸುಜಿತ್ ವೆಂಕಟರಾಮಯ್ಯ ಸಾಹಿತ್ಯವಿರುವ ಈ ಹಾಡಿಗೆ ಡಾಸ್ಮೋಡ್ ಸಂಗೀತ ನೀಡಿದ್ದಾರೆ. ಹಾಡಿಗೆ ರಂಗಾಯಣ ರಘು ಹೆಜ್ಜೆ ಹಾಕಿರುವುದು ವಿಶೇಷ.

ಇದು ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್ನ 4ನೇ ಸಿನಿಮಾವಾಗಿದೆ. ಚಿತ್ರದಲ್ಲಿ ನಾಗಭೂಷಣ್ಗೆ ‘ಉಪಾಧ್ಯಕ್ಷ’ ಸಿನಿಮಾ ಖ್ಯಾತಿಯ ನಟಿ ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ. ಕರಾಟೆ ಕಿಂಗ್ ಪಾತ್ರದಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.