ಕ್ರೀಡಾ ಪ್ರಧಾನ ಹಲವಾರು ಚಿತ್ರಗಳು ತೆರೆಕಂಡು, ಯಶಸ್ವಿಯನ್ನೂ ಗಳಿಸಿವೆ. ಈಗ ಆ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ಹಾಕಿ ಆಟದ ಸುತ್ತ ಹೆಣೆದಿರುವ ‘ಎ1 ಎಕ್ಸ್ಪ್ರೆಸ್’ ಎಂಬ ಕ್ರೀಡಾ ಚಿತ್ರ ತೆಲುಗುನಲ್ಲಿ ನಿರ್ಮಾಣವಾಗುತ್ತಿದೆ. ಲಾವಣ್ಯ ತ್ರಿಪಾಠಿ ಹಾಕಿ ಆಟಗಾರ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅದಕ್ಕಾಗಿ ಅವರು ಹಾಕಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. ‘ಅಂದಲಾ ರಾಕ್ಷಸಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಲಾವಣ್ಯ ಈ ಚಿತ್ರದಲ್ಲಿ ಲಾವಣ್ಯ ರಾವ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಲಾವಣ್ಯ ಜನ್ಮದಿನದಂದು ಸಹ ನಟ ಸಂದೀಪ್ ಕೃಷ್ಣಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ‘ಎ1 ಎಕ್ಸ್ಪ್ರೆಸ್‘ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಜೀವನ್ ಕಣಕೋಲಾನು ಈ ಚಿತ್ರದೊಂದಿಗೆ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.