ಬೆಂಗಳೂರು: ಬಹುಭಾಷಾ ನಟಿ ಲೀಲಾವತಿ ಅವರಿಗೆ ಪ್ರಾಣಿ–ಪಕ್ಷಿಗಳೆಂದರೆ ಅಚ್ಚುಮೆಚ್ಚು. ಮನೆಯಲ್ಲಿ ಜಾನುವಾರುಗಳನ್ನು ಸಾಕುವ ಜೊತೆಗೆ ಶ್ವಾನಗಳನ್ನೂ ಸಾಕಿದ್ದರು. ಲೀಲಮ್ಮನಿಗೆ ‘ಕರಿಯ’ (ಬ್ಲ್ಯಾಕಿ) ಶ್ವಾನ ಎಂದರೆ ಬಹಳ ಇಷ್ಟ. ಲೀಲಾವತಿ ಅವರನ್ನು ಕಳೆದುಕೊಂಡಿದ್ದ ‘ಕರಿಯ’ ಶ್ವಾನ ಕಣ್ಣೀರು ಹಾಕುತ್ತಿದೆ
.ಕನ್ನಡ ಚಿತ್ರರಂಗದ ‘ರಾಣಿ ಹೊನ್ನಮ್ಮ’ ಲೀಲಾವತಿ ಅಸ್ತಂಗತ.
ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಅಲ್ಲಿಗೆ ಮುದ್ದಿನ ಕರಿಯನನ್ನು ಕರೆತರಲಾಗಿತ್ತು. ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ರವಾನೆ ಮಾಡುವುದಕ್ಕೂ ಮುನ್ನ ಲೀಲಮ್ಮನ ದರ್ಶನ ಪಡೆದ ‘ಕರಿಯ’ ಕಣ್ಣೀರು ಹಾಕಿತು.

ಪಾರ್ಥಿವ ಶರೀರವನ್ನು ಒಮ್ಮೆ ದಿಟ್ಟಿಸಿ ನೋಡಿ, ಮೌನವಾಯಿತು. ಪಕ್ಕದಲ್ಲಿದ್ದ ವಿನೋದ್ ರಾಜ್ ಅವರು ಶ್ವಾನವನ್ನು ಮುದ್ದಾಡಿ ಮೈದಡವಿದರು. ಪ್ರೀತಿಯ ಶ್ವಾನವನ್ನು ಸಂತೈಸಿದರು. ಕರಿಯನ ಸ್ಥಿತಿಕಂಡು ಭದ್ರತಾ ಕೆಲಸಕ್ಕೆ ನಿಯೋಜಿಸಲಾಗಿದ್ದ ಪೊಲೀಸರೂ ಆ ಕ್ಷಣದಲ್ಲಿ ಭಾವುಕರಾದರು.

‘ಶುಕ್ರವಾರ ಸಂಜೆಯಿಂದಲೂ ‘ಕರಿಯ’ ಊಟ ಸೇವಿಸುತ್ತಿಲ್ಲ. ಸೋಲದೇವನಹಳ್ಳಿಯ ಮನೆಯಲ್ಲೂ ಒಂದೇ ಸಮನೆ ಬೊಗಳುತ್ತಿದೆ’ ಎಂದು ತೋಟದ ಮನೆ ಕಾರ್ಮಿಕರು ಹೇಳಿದರು.
.ಲೀಲಾವತಿ ಅಂತಿಮ ದರ್ಶನ: ಹಿರಿಯ ನಟಿ ನೆನೆದು ಅಭಿಮಾನಿಗಳ ಕಣ್ಣೀರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.