ಬೆಂಗಳೂರು: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಅನೀಲ್ ಅರೋರಾ (ಅನೀಲ್ ಗುಪ್ತಾ) ಅವರು ಬುಧವಾರ ಬಾಂದ್ರಾದ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಏತನ್ಮಧ್ಯೆ ನಟಿ ತಮ್ಮ ತಂದೆಯ ಸಾವಿನ ಬಗ್ಗೆ ಭಾವನಾತ್ಮಕ ಪೋಸ್ಟ್ ಇನ್‌ಸ್ಟಾ ಪೋಸ್ಟ್ ಹಂಚಿಕೊಂಡಿದ್ದಾರೆ.

ನಮ್ಮ ತಂದೆ ಇಂದು ನಮ್ಮನ್ನು ಅಗಲಿದ್ದಾರೆ. ನಾವು ನಮ್ಮ ಕುಟುಂಬ ತುಂಬಾ ದುಃಖದಲ್ಲಿದ್ದೇವೆ. ಅವರೊಬ್ಬ ಉತ್ತಮ ತಂದೆ, ಪತಿ, ತಾತ ಹಾಗೂ ಒಬ್ಬ ಉತ್ತಮ ನಾಗರಿಕ ಆಗಿದ್ದರು. ಮಾಧ್ಯಮಗಳು ನಮ್ಮ ಖಾಸಗಿತನ ಗೌರವಿಸಬೇಕು. ಮುಂದಿನ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಆತ್ಮಹತ್ಯೆಯೋ? ಆಕಸ್ಮಿಕ ಸಾವೋ?

ಅನೀಲ್ ಅರೋರಾ ಅವರ ಸಾವು ಆತ್ಮಹತ್ಯೆಯೋ? ಆಕಸ್ಮಿಕವೋ? ಎಂಬುದುನ್ನು ಮುಂಬೈ ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಅನೀಲ್ ಅರೋರಾ ಅವರ ಸಾವು ಪ್ರಾಥಮಿಕವಾಗಿ ಆತ್ಮಹತ್ಯೆ ಎಂದು ತೋರುತ್ತಿದ್ದು, ಆದರೆ ಸಂಪೂರ್ಣ ತನಿಖೆ ನಡೆಸಿದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕುರಿತು ಕೆಲ ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.

ಅನೀಲ್ ಅರೋರಾ ಕುಟುಂಬದವರು, ‘ಇದು ಆತ್ಮಹತ್ಯೆಯಲ್ಲ, ಬಾಲ್ಕನಿಯಿಂದ ಕಾಲು ಜಾರಿ ಬಿದ್ದು ಅನಿಲ್ ಮೃತಪಟ್ಟಿದ್ದಾರೆ’ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಕೆಲಹೊತ್ತಿನ ನಂತರ ಘಟನಾ ಸ್ಥಳಕ್ಕೆ ಮಲೈಕಾ ಅರೋರಾ ಹಾಗೂ ಅವರ ತಂಗಿ ಅಮೃತಾ ಅರೋರಾ, ಅರ್ಬಾಜ್ ಖಾನ್ ಸೇರಿದಂತೆ ಅನೇಕರು ದೌಡಾಯಿಸಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ.

ಪಂಜಾಬ್ ಮೂಲದ ಅನೀಲ್ ಅರೋರಾ ಅವರು ಇಂಡಿಯನ್ ಮರ್ಚಂಟ್ ನೇವಿಯ ಮಾಜಿ ಉದ್ಯೋಗಿಯಾಗಿದ್ದರು. ಅವರ ಪತ್ನಿ ಜಾಯ್ಸ್ ಪಾಲಿಕಾರ್ಪ್ ಮಲಯಾಳಿ ಮೂಲದ ಕ್ರಿಶ್ಚಿಯನ್ ಆಗಿದ್ದರು.

ಮಲೈಕಾ ಅವರ ತಾಯಿ ಜಾಯ್ಸ್ ಅವರು ಮಲೈಕಾ 16 ವರ್ಷದವರಿದ್ದಾಗ ಅನಿಲ್ ಅರೋರಾ ಅವರಿಂದ ವಿಚ್ಚೇದನ ಪಡೆದಿದ್ದರು.

ಠಾಣೆ ಮೂಲದ 50 ವರ್ಷದ ಮಲೈಕಾ 1997ರಿಂದ ಹಿಂದಿ ಚಿತ್ರರಂಗ ಹಾಗೂ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 1998 ರಲ್ಲಿ ಸಲ್ಮಾನ್ ಖಾನ್ ಅವರ ಸಹೋದರ ನಟ ಅರ್ಬಾಜ್ ಖಾನ್ ಅವರನ್ನು ವರಿಸಿದ್ದರು. ನಂತರ ಅರ್ಬಾಜ್ ಅವರಿಗೆ 2017ರಲ್ಲಿ ವಿಚ್ಚೇದನ ನೀಡಿದ್ದರು. ಸದ್ಯ ಮಲೈಕಾ ಅವರು ನಟ ಅರ್ಜುನ್ ಕಪೂರ್ ಅವರೊಂದಿಗೆ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.