ಬೆಂಗಳೂರು: ತಮ್ಮ ಮಾನ ಹರಾಜು ಹಾಕಿಕೊಂಡು ಯಾವ ಹೆಣ್ಣು ಕೂಡ ಪ್ರಚಾರ ಬಯಸುವುದಿಲ್ಲ, ನಾನು ಶ್ರುತಿಯನ್ನು ಬೆಂಬಲಿಸುತ್ತೇನೆ ಎಂದು ನಟಿ ನೀತು ಶೆಟ್ಟಿ ಹೇಳಿದರು.

ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, ನಾನು ಶ್ರುತಿಯನ್ನು ಬೆಂಬಲಿಸುತ್ತೇನೆ, ಏಕೆಂದರೆ ಈ ರೀತಿಯ ವಿಚಾರಗಳನ್ನು ಯಾರು ಕೂಡಪ್ರಚಾರಕ್ಕಾಗಿ ಹೇಳುವುದಿಲ್ಲ, ಕೈಯಲ್ಲಿ ಸಿನಿಮಾಗಳು ಇಲ್ಲ, ಸ್ವಲ್ಪ ಹೆಸರು ಮಾಡೋಣ ಎಂಬ ದುರುದ್ದೇಶ ಯಾವ ಹುಡುಗಿಗೂ ಇರುವುದಿಲ್ಲ ಎಂದರು.

ಇದನ್ನೂ ಓದಿ:ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!

ನಾವು ಶ್ರುತಿಗೆ ಬೆಂಬಲನೀಡಿದಾಕ್ಷಣ ಆ ಹಿರಿಯ ನಟರನ್ನು ಕಡೆಗಣಿಸಿದಂತೆ ಎಂಬ ಉದ್ದೇಶ ಅಲ್ಲವೇ ಅಲ್ಲ, ನಾವು ಶ್ರುತಿಯನ್ನು ಯಾಕೆ ಬೆಂಬಲಿಸುತ್ತೇನೆ ಎಂದರೆ, ನಿನ್ನೆಯಿಂದ ನಾನು ಗಮನಿಸುತ್ತಿದ್ದೇನೆ ಎಲ್ಲಒಮ್ಮುಖಅಭಿಪ್ರಾಯಗಳೇ ವ್ಯಕ್ತವಾಗುತ್ತಿವೆ,ಶ್ರುತಿಗಾಗಿರುವ ನೋವನ್ನು ಅರ್ಥಮಾಡಿಕೊಳ್ಳಿ ಹಾಗಾಂತ ಅವರು ಒಳ್ಳೆಯವರು, ಇವರು ಕೆಟ್ಟವರೂ ಎಂದುಹೇಳುತ್ತಿಲ್ಲ, ಪ್ರಚಾರಕ್ಕಾಗಿ ಯಾರೂತಮ್ಮ ಮಾನ ಹರಾಜು ಹಾಕಿಕೊಳ್ಳುವುದಿಲ್ಲ, ಅಲ್ಲದೇ ಶ್ರುತಿ 16–17 ವರ್ಷದ ಹುಡುಗಿಯೂ ಅಲ್ಲ, ಅವರು ಪ್ರಬುದ್ಧರಾಗಿದ್ದಾರೆ, ಅವರಿಗೂ ವಿವೇಚನೆ ಇದೆ ಎಂದರು.

ನಾನು ಚಿತ್ರರಂಗಕ್ಕೆ ಬಂದು 14 ವರ್ಷಗಳಾದವು, ಇಂತಹ ಅನುಭವಗಳು ನನಗೆ ತುಂಬಾ ಆಗಿಲ್ಲ, ಒಂದೆರಡು ಕಡೆ ಕಹಿ ಅನುಭವಗಳಾಗಿವೆ. ಇದಕ್ಕೆ ಸಾಕ್ಷಿ ಅಂತ ನಾನು ಜನರಿಗೆ ಏನನ್ನೂತೋರಿಸಲ್ಲಿಕೆ ಆಗುವುದಿಲ್ಲ. ಕೆಲವು ಸಲ ನಟಿಗೆ ಹೇಳದೇ ನಾಯಕ ನಟರು ಮತ್ತು ನಿರ್ದೇಶಕರು ದೃಶ್ಯಗಳನ್ನು ಸಂಯೋಜಿಸಿರುತ್ತಾರೆ ಇದು ಕೂಡ ನನ್ನ ಪ್ರಕಾರ ತಪ್ಪು. ಏನು ಹೇಳಿದರರೂ ನಟಿ ಮಾಡಬೇಕು ಎನ್ನುವುದು ಇದೆಯಲ್ಲಾಎಂದು ವೃತ್ತಿಪರತೆ ಅಲ್ಲ.

ಇದನ್ನೂ ಓದಿ:ಸ್ಯಾಂಡಲ್ವುಡ್ #MeToo: ಶ್ರುತಿ ಹರಿಹರನ್ಗೆ ಹಲವೆಡೆಯಿಂದ ಬೆಂಬಲ

ಅವರು ಹಿರಿಯ ನಟರು, ಅವರು ಈ ರೀತಿ ಮಾಡುವುದಿಲ್ಲ ಎಂಬುದು ಮುಖ್ಯವಲ್ಲ, ಇಲ್ಲಿ ಶ್ರುತಿಗೆ ಆಗಿರುವ ನೋವು ಮತ್ತು ಅವಳ ಭಾವನೆಗಳನ್ನು ಜನರು ಅರ್ಥಮಾಡಿಕೊಳ್ಳಬೇಕು, ನಾನು ಶ್ರುತಿಯನ್ನು ಬೆಂಬಲಿಸುತ್ತೇನೆ ಎಂದು ನೀತು ಶೆಟ್ಟಿ ಪ್ರಜಾವಾಣಿಗೆ ತಿಳಿಸಿದರು.

ಇದನ್ನೂ ಓದಿ:ಅರ್ಜುನ್ಕ್ಷಮೆ ಕೇಳುವುದು ದೊಡ್ಡತನ,ನಾನು ಶ್ರುತಿ ಹರಿಹರನ್ ಪರ:ಪ್ರಕಾಶ್ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.