ಬೆಂಗಳೂರು: ‘ಮುಂಗಾರು ಮಳೆ‘ ಸಿನಿಮಾದ ಮೂಲಕ ಚಂದವನದ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಪೂಜಾಗಾಂಧಿ ತಮ್ಮ ಪತಿ ವಿಜಯ್ ಘೋರ್ಪಡೆ ಅವರ ಜೊತೆ ಇತ್ತೀಚಿಗೆ ಕವಿ ಶೈಲಕ್ಕೆ ಭೇಟಿ ನೀಡಿದ್ದರು.

ಕುವೆಂಪು ಅವರ ಮನೆಗೆ( ಕವಿ ಶೈಲ) ಭೇಟಿ ಸಂಬಂಧ ನಟಿ ಪೂಜಾಗಾಂಧಿ ಇನ್ಸ್ಟಾಗ್ರಾಮ್ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ನ.29ರಂದು ‘ಮಂತ್ರ ಮಾಂಗಲ್ಯ‘ ಪರಿಕಲ್ಪನೆಯ ಮೂಲಕ ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ಪೂಜಾ ಗಾಂಧಿ ಅವರು ಕನ್ನಡ ಕಲಿಕೆಯತ್ತ ಆಸಕ್ತಿ ತೋರಿದ್ದರು. ಕಳೆದ ಎರಡು ವರ್ಷಗಳಿಂದ ಕನ್ನಡದ ಅಕ್ಷರಗಳು, ವರ್ಣಮಾಲೆಯನ್ನು ಮಕ್ಕಳಂತೆ ಅವರು ಅಭ್ಯಾಸ ಮಾಡಿದ್ದಾರೆ. ಹಂತಹಂತವಾಗಿ ವಾಕ್ಯ ರಚನೆಯನ್ನೂ ಅವರು ಕಲಿತಿದ್ದಾರೆ. ಕನ್ನಡದ ಮೇಲಿನ ಅವರ ಪ್ರೀತಿಗೆ ಅವರೇ ಕನ್ನಡದಲ್ಲಿ ಬರೆದ ಮದುವೆ ಆಮಂತ್ರಣವೇ ಸಾಕ್ಷ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.