ಬೆಂಗಳೂರು: 2019ರ ಸ್ಯಾಂಡಲ್ವುಡ್ನ ಹಿಟ್ ಚಿತ್ರಗಳಲ್ಲಿ ಒಂದಾದ ಬೆಲ್ ಬಾಟಂ ಹಿಂದಿಗೆ ರಿಮೇಕ್ ಆಗಲಿದ್ದು, ನಟ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರಕ್ಕೆ ಟಿ. ಕೆ. ದಯಾನಂದ್ ಕತೆ ಬರೆದಿದ್ದರು. ರಿಶಬ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 80ರ ದಶಕದ ರೆಟ್ರೋ ಶೈಲಿಯ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡಿತ್ತು.

ಬೆಲ್ ಬಾಟಂ ಚಿತ್ರವನ್ನು ಮೆಚ್ಚಿದ್ದ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ಕೆಲ ನಿರ್ಮಾಪಕರು ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದ ಬಗ್ಗೆಈ ಹಿಂದೆ ವರದಿಯಾಗಿತ್ತು. ಈ ಚಿತ್ರದ ಕತೆಯನ್ನುಬಹುವಾಗಿ ಮೆಚ್ಚಿದ್ದ ಹಿಂದಿ ಚಿತ್ರ ತಯಾರಕ ನಿಖಿಲ್ ಅಡ್ವಾನಿ ಅವರು ನಟ ಅಕ್ಷಯ್ ಜೊತೆ ಸೇರಿ ನಿರ್ಮಾಣ ಮಾಡಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದು, ರಂಜಿತ್ ತಿವಾರಿ ನಿರ್ದೇಶನ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.