ಬೆಂಗಳೂರು: ಲೈಗರ್ ಖ್ಯಾತಿಯ ನಟಿ ಅನನ್ಯಾ ಪಾಂಡೆಗೆ ಸಿನಿಮಾಗಳಲ್ಲಿ ಅವಕಾಶ ಕಡಿಮೆ ಇದ್ದರೂ ಮಾಡೆಲಿಂಗ್ ಮೂಲಕ ಸದಾ ಬ್ಯುಜಿ ಇರುತ್ತಾರೆ.

ಈ ನಟಿ ಇದೀಗ ಮಾಡೆಲಿಂಗ್ ಮೂಲಕವೇ ತನ್ನ ಅಭಿಮಾನಿಗಳಿಗೆ ಪರಿಸರ ಪಾಠ ಹೇಳಿದ್ದಾರೆ.

ಇತ್ತೀಚಿಗೆ ಪ್ಯಾರಿಸ್‌ನಲ್ಲಿ ನಡೆದ Paris Couture Week ನಲ್ಲಿ ಭಾಗವಹಿಸಿದ್ದ ಅನನ್ಯಾ, ಆಕರ್ಷಕ ಉಡುಪು ಧರಿಸಿ ಗಮನ ಸೆಳೆದಿದ್ದಾರೆ. ವಿಶೇಷವೆಂದರೆ ಅವರು ಕಪ್ಪು ಸ್ಕರ್ಟ್ ನಲ್ಲಿ ಚಿಟ್ಟೆ ಮಾದರಿಯ ಟಾಪ್ ಧರಿಸಿದ್ದರು.

ಈ ಮೂಲಕವೇ ಅವರು ಪರಿಸರ ಪಾಠ ಹೇಳಿದ್ದಾರೆ. ‘ಇದು ಸೂಪರ್ ಹೀರೊ ಕಲ್ಪನೆ. ನಾವು ಕೀಟಗಳೊಂದಿಗೂ ಬದುಕುವ ಅವಶ್ಯಕತೆ ಇದೆ ಎಂಬುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟರು. ಈ ಭೂಮಿಯಲ್ಲಿ ಕೇವಲ ಮನುಷ್ಯ ಬಾಳಬೇಕೆಂದುಕೊಂಡು ಕೀಟಗಳ, ಸರಿಸೃಪಗಳ ಮುಂತಾದ ಪ್ರಾಣಿ ಪಕ್ಷಿಗಳ ಆವಾಸಸ್ಥಾನಗಳನ್ನು ನಾಶಪಡಿಸುತ್ತಿದ್ದಾನೆ ಇದು ತುಂಬಾ ದುಃಖಕರ ಸಂಗತಿ' ಎಂದು ಬೇಸರ ವ್ಯಕ್ತಪಡಿಸಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೇ ಈ ಆಕರ್ಷಕ ಉಡುಪನ್ನು ಡಿಸೈನ್ ಮಾಡಿದ್ದು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಅವರು. ಸದ್ಯ ಅನನ್ಯಾ ‘ಕಂಟ್ರೋಲ್’ ಎಂಬ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.