ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿ ತಲೆಮರೆಸಿಕೊಂಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗಾಗಿ ಆಂಧ್ರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಮಗ ನಾರಾ ಲೋಕೇಶ್ ಅವರ ತಿರುಚಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಸಭ್ಯವಾಗಿ ಪೋಸ್ಟ್ ಮಾಡಿದ ಆರೋಪದ ಮೇಲೆ ವರ್ಮಾ ಅವರ ವಿರುದ್ಧ ನವೆಂಬರ್ 11ರಂದು ಪ್ರಕಾಶಂ ಜಿಲ್ಲೆಯ ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನವೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ವರ್ಮಾ ಅವರಿಗೆ ಪೊಲೀಸರು ನೋಟಿಸ್ ಹೊರಡಿಸಿದ್ದು, ಬಂಧನದ ಭೀತಿಯಿಂದ ವರ್ಮಾ ವಿಚಾರಣೆಗೆ ಗೈರಾಗಿದ್ದರು. ವರ್ಮಾ ಅವರಿಗಾಗಿ ಆಂಧ್ರ ಪೊಲೀಸರು ಮೂರು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದು, ಎರಡು ತಂಡಗಳು ಹೈದರಾಬಾದ್ನಲ್ಲಿ , ಒಂದು ತಂಡ ತಮಿಳುನಾಡಿನಲ್ಲಿ ಬೀಡು ಬಿಟ್ಟಿವೆ.

‘ಒಂದು ತಂಡ ಚೆನ್ನೈಗೆ ತೆರಳಿದ್ದು, ಮತ್ತೊಂದು ತಂಡ ವರ್ಮಾ ಅವರ ಮನೆಗೆ ಹೋಗಿದೆ. ಮೂರನೇ ತಂಡ ಹೈದರಾಬಾದ್ನಲ್ಲಿರುವ ಫಿಲ್ಮ್ ನಗರದಲ್ಲಿ ಹುಡುಕಾಟ ನಡೆಸುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

‘ಕೊಯೊಮತ್ತೂರಿಗೆ ತೆರಳಿರುವುದಾಗಿ ವರ್ಮಾ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅದರ ಆಧಾರ ಮೇಲೆ ಅಲ್ಲಿಗೆ ಪೊಲೀಸರು ತೆರಳಿದ್ದಾರೆ’ ಎಂದರು.

ಈ ಮೊದಲು, ಪ್ರಕರಣ ಸಂಬಂಧ ಪೊಲೀಸರ ಮುಂದೆ ಆನ್ಲೈನ್ ತನಿಖೆಗೆ ಹಾಜರಾಗಲು ಅವರು(ವರ್ಮಾ) ಇಚ್ಛಿಸುತ್ತಾರೆ ಎಂದು ವರ್ಮಾ ವಕೀಲರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.