‘ಅಂಜನ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.ಚಿತ್ರದ ಕಥೆಯು ಪ್ರಾರಂಭದಲ್ಲಿ ಹಳ್ಳಿ, ನಂತರ ನಗರಕ್ಕೆ ತೆಗೆದುಕೊಂಡು ಹೋಗುತ್ತದೆ. ಅಂಗವಿಕಲ, ಅಣ್ಣ ತಂಗಿ ಬಾಂಧವ್ಯ ಮತ್ತು ರೌಡಿಗಳಾದವರ ಮನಃಸ್ಥಿತಿ, ಮನೆಸ್ಥಿತಿ ಹೇಗಿರುತ್ತದೆ? ಮನೆಯಲ್ಲಿ ತಂಗಿಯ ಮದುವೆ ಬಂದಾಗ, ಇಂತಹ ಪರಿಸ್ಥಿತಿಯಲ್ಲಿ ಅಣ್ಣನಾದವನು ಏನು ಮಾಡುತ್ತಾನೆ ಎಂಬ ವಿಷಯಗಳು ತೆರೆದುಕೊಳ್ಳಲಿವೆ. ತಂಗಿಯಾಗಿ ಮಡಿಕೇರಿ ಮುತ್ತಮ್ಮ, ತಾಯಿ ಪಾತ್ರದಲ್ಲಿ ಮಂಜುಳಮ್ಮ ನಟಿಸಿದ್ದಾರೆ.

ಅಂಜನ್ ಅವರು ಈ ಚಿತ್ರದ ನಾಯಕ.ಆರ್.ಸಾಗರ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇದೆ. ಬೆಂಗಳೂರು, ಶಿವಮೊಗ್ಗ, ಶಂಕರಘಟ್ಟ, ಹೊನ್ನಾವರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸರ್ಕಾರವು ಚಿತ್ರಮಂದಿರಗಳಲ್ಲಿ ಶೇಕಡ ನೂರರಷ್ಟು ಆಸನ ಭರ್ತಿಗೆ ಅನುಮತಿ ನೀಡಿದಾಗ, ಚಿತ್ರವನ್ನು ಬಿಡುಗಡೆ ಮಾಡಲಾಗುವುದು ಎನ್ನುತ್ತಾರೆ ಸಾಗರ್.

ಪ್ರದೀಪ್ ಸೋನ್ಸ್ ಅವರು ಈ ಚಿತ್ರದ ನಿರ್ಮಾಪಕ ಮತ್ತು ಖಳನಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.