ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಟ್ವಿಟರ್ನಲ್ಲಿ ಸುಮಾರು 80,000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಕೇವಲ 36 ಗಂಟೆಗಳಲ್ಲಿ ಇಷ್ಟೊಂದು ಸಂಖ್ಯೆಯ ಫಾಲೋವರ್ಗಳನ್ನುಕಳೆದುಕೊಂಡ ಬಗ್ಗೆ ಕಳವಳಕ್ಕೆ ಒಳಗಾದ ಅನುಪಮ್ ಖೇರ್ ಟ್ವಿಟರ್ ಇಂಡಿಯಾ ಬಳಿ ಕಾರಣ ಕೇಳಿದ್ದಾರೆ.

ತಾತ್ಕಾಲಿಕವಾಗಿ ಉಂಟಾದ ದೋಷವೇ ಅಥವಾ ತಾಂತ್ರಿಕವಾಗಿ ಏನಾದರು ದೋಷವಿದೆಯೇ ಎಂದು ಟ್ವಿಟರ್ಗೆ ಪ್ರಶ್ನಿಸಿರುವ ಖೇರ್, ಇದು ನಾನು ಗಮನಿಸಿದಾಗ ಕಂಡುಬಂದ ಅಂಶವಷ್ಟೇ. ದೂರು ನೀಡಿರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಹಲವು ಟ್ವಿಟರ್ ಬಳಕೆದಾರರು ಫಾಲೋವರ್ಸ್ ಕಳೆದುಕೊಂಡಿರುವ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದಾ ಟ್ವಿಟರ್ನಲ್ಲಿ ಕ್ರಿಯಾಶೀಲರಾಗಿರುವ ಅನುಪಮ್ ಖೇರ್ ಸೆಪ್ಟೆಂಬರ್ 2009ರಲ್ಲಿ ಟ್ವಿಟರ್ ಖಾತೆ ತೆರೆದಿದ್ದರು. ಪ್ರಸ್ತುತ 1.87 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.

ಒಟಿಟಿಗೆ ಫಹದ್ನ ಮಲಿಕ್ ಸೇರಿದಂತೆ ಕೋಲ್ಡ್ ಕೇಸ್, ಅರಬ್ಬೀಕಡಲಿಂಡೆ ಸಿಂಹಂ!

20 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪನದ ಕಥಾವಸ್ತುವಿನೊಂದಿಗೆ ಮೂಡಿ ಬಂದಿರುವ 'ಭುಜ್: ದಿ ಡೇ ಇಂಡಿಯಾ ಶಾಕ್' ಸಿನಿಮಾದಲ್ಲಿ ಘಟನೆಯನ್ನು ವಿವರಿಸುವ ನಿರೂಪಕರಾಗಿ ಖೇರ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟ್ರೈಲರ್ ಬಿಡುಗಡೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.