ನವದೆಹಲಿ:'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತಾಗಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಬೇಷರತ್ ಕ್ಷಮೆಯಾಚಿಸುವುದಾಗಿ ಇಸ್ರೇಲ್ ನಿರ್ಮಾಪಕ ನಾಡವ್ ಲ್ಯಾಪಿಡ್ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರಿಗೆ ನೋವನ್ನುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಅವರು ಹೇಳಿದರು.

ಅದೇ ಹೊತ್ತಿಗೆ ನಾನು ಹೇಳಲು ಬಯಸಿದ್ದನ್ನು ಸ್ಪಷ್ಟವಾಗಿಯೇ ಹೇಳಿದ್ದೇನೆ. ನನಗೆ ಮತ್ತು ನನ್ನ ಜ್ಯೂರಿ ಸದಸ್ಯರಿಗೆ ಅದು ಅಸಭ್ಯ ಪ್ರಚಾರದ ಚಿತ್ರವಾಗಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಯೋಗ್ಯವಲ್ಲ. ನಾನು ಅದನ್ನು ಮತ್ತೆ ಪುನರಾವರ್ತಿಸುತ್ತೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಇದನ್ನೂ ಓದಿ:'ಕಾಶ್ಮೀರ್ ಫೈಲ್ಸ್ ವಿರೋಧಿಸಿದ್ದ ಇಸ್ರೇಲ್ನ ನಿರ್ದೇಶಕನ ಬಗ್ಗೆ ತನಿಖೆಯಾಗಲಿ'

ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್ ಅಸಭ್ಯ, ಕೀಳು ಅಭಿರುಚಿಯ ಚಿತ್ರ ಎಂದು ಐಎಫ್ಎಫ್ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರೂ ಆಗಿರುವ ನಾಡವ್ ಲ್ಯಾಪಿಡ್ ಹೇಳಿದ್ದರು.

ಯಾರಿಗೂ ಅವಮಾನವನ್ನುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ನೋವನ್ನುಂಟು ಮಾಡುವುದು ನನ್ನ ಗುರಿಯಾಗಿರಲಿಲ್ಲ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು 'ಸಿಎನ್ಎನ್-ನ್ಯೂಸ್18'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.