ಮಲೆಯಾಳಂನ ಖ್ಯಾತ ನಿರ್ದೇಶಕ ಬಿ. ಉನ್ನಿಕೃಷ್ಣನ್ ಹಾಗೂ ಮೋಹನ್ಲಾಲ್ ಜೋಡಿ ‘ಆರಟ್ಟು’ ಸಿನಿಮಾ ಮೂಲಕ ಮತ್ತೆ ಒಂದಾಗಲಿದೆ. ಹಿಂದೆ ಈ ಜೋಡಿ ಮಿ. ಫ್ರಾಡ್ ಹಾಗೂ ವಿಲನ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಆದರೆ ಹೊಸ ವಿಷಯ ಏನೆಂದರೆ ಈ ಸಿನಿಮಾದಲ್ಲಿ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ರೆಹಮಾನ್ ಜೊತೆ ಶೂಟಿಂಗ್ನಲ್ಲಿ ಭಾಗವಹಿಸಿದ್ದ ಮೋಹನ್ಲಾಲ್ ಈ ವಿಷಯಕ್ಕೆ ಸಂಬಂಧಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ. ಉನ್ನಿಕೃಷ್ಣನ್, ರೆಹಮಾನ್ ಜೊತೆ ತಾವು ನಿಂತಿರುವ ಫೋಟೊ ಹಂಚಿಕೊಂಡ ಮೋಹನ್ಲಾಲ್ ‘ತುಂಬಾ ಅಪರೂಪ ಹಾಗೂ ಅವಿಸ್ಮರಣೀಯ’ ಎಂದು ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಆರಟ್ಟು ನಿರ್ದೇಶಕ ಕೆಲ ದಿನಗಳ ಹಿಂದೆ ಚಿತ್ರದ ಸಂಪೂರ್ಣ ಶೂಟಿಂಗ್ ಅನ್ನು ಮುಗಿಸಿದ್ದಾರೆ. ಚಿತ್ರದಲ್ಲಿ ವಿಶೇಷ ಮ್ಯೂಸಿಕ್ ವಿಡಿಯೊವೊಂದರಲ್ಲಿ ರೆಹಮಾನ್ ಕಾಣಿಸಿಕೊಳ್ಳಲಿದ್ದಾರಂತೆ.

ಮೂವತ್ತು ವರ್ಷಗಳ ಬಳಿಕ ರೆಹಮಾನ್ ಮಲಯಾಳಂ ಚಿತ್ರರಂಗಕ್ಕೆ ಮರಳುತ್ತಿರುವುದು ವಿಶೇಷ. 1992ರಲ್ಲಿ ಬಿಡುಗಡೆಯಾದ ಯೋಧ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಸಿನಿಮಾದಲ್ಲೂ ಮೋಹನ್ಲಾಲ್ ನಾಯಕನಾಗಿದ್ದರು. ಪುಲಿಮುರುಗನ್ ಚಿತ್ರಕ್ಕೆ ಚಿತ್ರಕಥೆ ಬರೆದ ಉದಯ್ಕಷ್ಣನ್ ಅವರು ಆರಟ್ಟು ಚಿತ್ರಕ್ಕೂ ಚಿತ್ರಕಥೆ ಬರೆದಿದ್ದಾರೆ.

ಚಿತ್ರದಲ್ಲಿ ಸಂಗೀತ್ ಸಿವನ್, ನೆಡುಮುಡಿ ವೇಣು, ಸಾಯಿ ಕುಮಾರ್, ಸಿದ್ಧಿಕಿ, ವಿಜಯರಾಘವನ್, ಜಾನಿ ಆಂಥೋನಿ, ಶೀಲಾ, ರಚನಾ ನಾರಾಯಣ ಕುಟ್ಟಿ, ಸ್ವಸ್ಥಿಕ ಮೊದಲಾದವರು ನಟಿಸಿದ್ದಾರೆ. ಆ ಚಿತ್ರವು ಏಪ್ರಿಲ್ 12ಕ್ಕೆ ಬಿಡುಗಡೆಯಾಗಲಿದೆ.

ಮೋಹನ್ಲಾಲ್ ದೃಶ್ಯಂ 2 ನಲ್ಲಿ ಕೊನೆಯ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.