ಜೇಮ್ಸ್ ಕೆಮರೂನ್ ಅವರ ‘ಅವತಾರ್– ದಿ ವೇ ಆಫ್ ವಾಟರ್’ ಜಾಗತಿಕವಾಗಿ ₹7000 ಕೋಟಿ ಗಳಿಸಿದೆ. ಡಿ.16ರಂದು ತೆರೆ ಕಂಡು ಬಾಕ್ಸಾಫೀಸ್‌ನಲ್ಲಿ ಎರಡನೆ ವಾರವೂ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ, ಭಾರತದಲ್ಲಿ ₹300 ಕೋಟಿ ಗಳಿಕೆ ಕ್ಲಬ್ ಸೇರಿದೆ. ಗಳಿಕೆ ಪಟ್ಟಿಯಲ್ಲಿ ಲಾಲ್ ಸಿಂಗ್ ಚಡ್ಡಾ, ವಿಕ್ರಂ ವೇದದಂತಹ ಹಲವು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿದೆ.

ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಮುಂಗಡ ಬುಕ್ಕಿಂಗ್ ಕಂಡಿದ್ದು, ಹಲವು ನಗರಗಳಲ್ಲಿ ಟಿಕೆಟ್ ದರ ₹2500–3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡಿದ್ದರು. ಚಿತ್ರ ತೆರೆಗೆ ಬಂದ 3 ದಿನದಲ್ಲಿ ₹100 ಕೋಟಿ ಗಳಿಸಿತ್ತು. ಅವೆಂಜರ್ಸ್ ನಂತರ ಭಾರತದಲ್ಲಿ ಅವತಾರ್–2 ದೊಡ್ಡ ಹಿಟ್ ಚಿತ್ರವಾಗಿದೆ. ಈ ವಾರವೂ ಭಾರತದಲ್ಲಿ ಚಿತ್ರದ ಗಳಿಕೆ ಉತ್ತಮವಾಗಿದ್ದು, ₹500 ಕೋಟಿ ಗಳಿಕೆ ಕ್ಲಬ್ ಸೇರಲಿದೆ ಎಂದು ತಜ್ಞರು ಹೇಳಿದ್ದಾರೆ.

ವಿಶ್ವದಾದ್ಯಂತ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲೂ ಗಳಿಕೆ ಜೋರಾಗಿದೆ. ಸಿನಿಮಾ ಒಂದು ಶತಕೋಟಿ ಡಾಲರ್ ಗಳಿಕೆಯ ಸನಿಹದಲ್ಲಿದೆ. ಈ ವರ್ಷ ಟಾಪ್ ಗನ್ ಮತ್ತು ಜುರಾಸಿಕ್ ಪಾರ್ಕ್ ಡೊಮಿನಾನ್ ಚಿತ್ರಗಳು ಮಾತ್ರ ಶತಕೋಟಿ ಡಾಲರ್ ಕ್ಲಬ್ ಸೇರಿವೆ. ಅವತಾರ್ ಮೊದಲ ಭಾಗ ಜಾಗತಿಕವಾಗಿ 2.9 ಶತಕೋಟಿ ಡಾಲರ್ ಗಳಿಕೆ ಕಂಡು ಇತಿಹಾಸ ಬರೆದಿತ್ತು.

ಸಿನಿಮಾದ ಕಥೆ ಸುಮಾರಾಗಿದೆ. ಆದರೆ ತಾಂತ್ರಿಕವಾಗಿ ಸಿನಿಮಾ ಅತ್ಯುತ್ಕೃಷ್ಟವಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ನೀರಿನೊಳಗಿನ ಜಗತ್ತು, ವಿಎಫ್‌ಎಕ್ಸ್, 3ಡಿ ಎಫೆಕ್ಟ್‌ಗಳು ಅತ್ಯದ್ಬುತವಾಗಿವೆ. ಕ್ಲೈಮ್ಯಾಕ್ಸ್‌ನ ಯುದ್ಧ ಎದ್ದು ನಿಂತು ಚಪ್ಪಾಳೆ ತಟ್ಟುವಂತಿದೆ. ಮೇಕಿಂಗ್, ಎಫೆಕ್ಟ್, ಕೊನೆಯ ಒಂದು ಗಂಟೆಯ ಆ್ಯಕ್ಷನ್ ಎಲ್ಲವೂ ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.