ಬೆಂಗಳೂರು: ಹಾಲಿವುಡ್ ನಿರ್ದೇಶಕಜೇಮ್ಸ್ ಕೆಮರೂನ್ ಅವರ 'ಅವತಾರ್'ನಮುಂದುವರೆದ ಭಾಗವಾದ 'ಅವತಾರ್ ದಿ ವೇ ಆಫ್ ವಾಟರ್' ಹೊಸಸಿನಿಮಾಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.

ಹೌದು, ಕನ್ನಡಿಗರ ಒತ್ತಾಯಕ್ಕೆ ಮಣಿದಿರುವ ಚಿತ್ರದ ಭಾರತದಲ್ಲಿನ ಹಂಚಿಕೆದಾರರಾದ ‘20th ಸೆಂಚುರಿ ಸ್ಟುಡಿಯೋಸ್ ಇಂಡಿಯಾ’ ಕಂಪನಿ ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅದಕ್ಕೆ ಪೂರ್ವಭಾವಿಯಾಗಿ ಚಿತ್ರದ ಕನ್ನಡ ಟ್ರೇಲರ್‌ನ್ನು ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ.

ಕಳೆದ ವಾರ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಚಿತ್ರ ಡಿಸೆಂಬರ್ 16ಕ್ಕೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದು ತಿಳಿಸಲಾಗಿತ್ತು. ಕರ್ನಾಟಕದಲ್ಲಿ ಅವತಾರ್ ಅನ್ನು ಕನ್ನಡದಲ್ಲೇ ಬಿಡುಗಡೆ ಮಾಡಬೇಕು, ಇಂತಹ ಬಹು ನಿರೀಕ್ಷಿತ ಸಿನಿಮಾವನ್ನು ಕನ್ನಡಿಗರು ಕನ್ನಡದಲ್ಲಿ ಏಕೆ ನೋಡಬಾರದು? ಮಲೆಯಾಳಂನಲ್ಲಿ ಅವಕಾಶವಿದ್ದು, ಕನ್ನಡಕ್ಕೆ ಏಕೆ ಅವಕಾಶವಿಲ್ಲ ಎಂದು ಕೆಂಡಕಾರಿದ್ದರು.

ಇನ್ನು ಚಿತ್ರದ ಈ ನಿರ್ಧಾರವನ್ನು ಟ್ವಿಟರ್‌ನಲ್ಲಿ ಅನೇಕ ಕನ್ನಡಿಗರು ಸ್ವಾಗತಿಸಿದ್ದಾರೆ. ಹಾಲಿವುಡ್ ನಿರ್ಮಾಪಕ ಜಾನ್ ಲ್ಯಾಂಡೌ ಕೂಡ ಟ್ವೀಟ್ ಮಾಡಿದ್ದು, ನಮಸ್ತೆ ಇಂಡಿಯಾ, ನಾನು ಭಾರತದ ಬಹುಭಾಷಾ ಸಂಸ್ಕೃತಿಯನ್ನು ಗೌರವಿಸುತ್ತೇನೆ, ಆರು ಭಾಷೆಗಳಲ್ಲಿ ಅವತಾರ್ 2 ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.'ಅವತಾರ್ ದಿ ವೇ ಆಫ್ ವಾಟರ್' ಸಿನಿಮಾ ಡಿಸೆಂಬರ್ 16 ರಂದು ಬಿಡುಗಡೆಯಾಗುತ್ತಿದೆ.

ಟ್ರೇಲರ್‌ಗೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಹಿಂದಿನ ಅವತಾರ್ ಸಿನಿಮಾದಲ್ಲಿನ ನಾಯಕ ನಾಯಕಿಗೆ ಈ ಸಿನಿಮಾದಲ್ಲಿಮಕ್ಕಳಾಗಿದ್ದು ಹೊಸದೊಂದು ಲೋಕವನ್ನು ಜೇಮ್ಸ್ ಕೆಮರೂನ್ ಅನಾವರಣ ಮಾಡಲಿದ್ದಾರೆ.

ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಮುಖ್ಯ ತಾರಾಗಣದಲ್ಲಿದ್ದಾರೆ.

ಅವತಾರ್ ದಿ ವೇ ಆಫ್ ವಾಟರ್ಸಿನಿಮಾದ ಟ್ರೇಲರ್ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.