ಪ್ರಯೋಗಾತ್ಮಕ ಪಾತ್ರಗಳ ಅಭಿನಯದ ಮೂಲಕವೇ ಬಾಲಿವುಡ್ನಲ್ಲಿ ಛಾಪು ಮೂಡಿಸಿದವರು ನಟ ಆಯುಷ್ಮಾನ್ ಖುರಾನಾ. ಅವರ ನಟನೆಯ ಚಿತ್ರಗಳು ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಗಂಭೀರ ಪಾತ್ರವಿರಲಿ, ನವಿರು ಹಾಸ್ಯಭರಿತ ಪಾತ್ರವಿರಲಿ ಆಯುಷ್ಮಾನ್ ಜೀವ ತುಂಬಿರುವ ಪಾತ್ರಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅವರ ಅಭಿನಯದಲ್ಲಿ ತೆರೆ ಕಂಡಿರುವ ಹೊಸ ಚಿತ್ರ ‘ಬಾಲ’ ಕೂಡ ಯಶಸ್ಸಿನ ಓಟ ಮುಂದುವರಿಸಿದೆ.

ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಬೊಕ್ಕತಲೆಯಿಂದಾಗಿ ಸಮಸ್ಯೆ ಅನುಭವಿಸುವ ಯುವಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲೇ ರಂಗಭೂಮಿ ನಂಟು ಹೊಂದಿದ್ದ ಅವರು ಸಿನಿಮಾ ರಂಗದಲ್ಲೂ ಯಾವುದೇ ರೀತಿಯ ಪಾತ್ರಕ್ಕೂ ಒಗ್ಗಿಕೊಳ್ಳಬಲ್ಲೆ ಎಂಬುದನ್ನು ಕಡಿಮೆ ಅವಧಿಯಲ್ಲೇ ಸಾಧಿಸಿ ತೋರಿಸಿದ್ದಾರೆ. ಈಚೆಗೆ ತೆರೆಕಂಡಿದ್ದ ‘ಡ್ರೀಮ್ ಗರ್ಲ್’ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಹುಡುಗಿಯ ಧ್ವನಿ ಅನುಕರಿಸುವ ಪಾತ್ರದ ಮೂಲಕ ಈ ಸಿನಿಮಾದಲ್ಲಿ ಅವರು ಪ್ರೇಕ್ಷಕರ ಮನ ಸೆಳೆದಿದ್ದರು.

ಕಿರುತೆರೆಯಲ್ಲಿ ಭವಿಷ್ಯ ರೂಪಿಸಲು ಪ್ರಯತ್ನಿಸುತ್ತಿದ್ದ ಆಯುಷ್ಮಾನ್ಗೆ 2012ರಲ್ಲಿ ತೆರೆಕಂಡಿದ್ದ ‘ವಿಕ್ಕಿ ಡೋನರ್’ ಚಿತ್ರ ಬೆಳ್ಳಿತೆರೆಯ ಬಾಗಿಲು ತೆರೆದಿತ್ತು. ಇದರಲ್ಲಿ ಅವರದು ವೀರ್ಯ ದಾನ ಮಾಡುವ ಯುವಕನ ಪಾತ್ರ. ಅವರ ನಟನೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.

ಈ ವರ್ಷ ಬಿಡುಗಡೆಗೊಂಡಿರುವ ‘ಆರ್ಟಿಕಲ್ 15’ ಚಿತ್ರದಲ್ಲಿನ ಗಂಭೀರ ಅಭಿನಯದ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಇದರಲ್ಲಿ ಅವರುಖಡಕ್ ಪೊಲೀಸ್ ಅಧಿಕಾರಿಯ ಗೆಟಪ್ನಲ್ಲಿ ಮಿಂಚಿದ್ದರು.ಅತ್ಯಾಚಾರ, ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಪೊಲೀಸ್ ಅಧಿಕಾರಿಯ ಪಾತ್ರವದು.ಈ ಚಿತ್ರ ಬಾಲಿವುಡ್ನಲ್ಲಿ ಹೆಚ್ಚು ಸದ್ದು ಮಾಡಿತ್ತು.

2013ರಲ್ಲಿ ರೋಹನ್ ಸಿಪ್ಪಿ ನಿರ್ದೇಶನದ ‘ನೌಟಂಕಿ ಸಾಲಾ’, 2014ರಲ್ಲಿ ನೂಪುರ್ ಆಸ್ತಾನಾ ನಿರ್ದೇಶನದ ‘ಬೇವಕೂಫಿಯಾನ್’ ಚಿತ್ರದಲ್ಲೂ ಆಯುಷ್ಮಾನ್ ಅವರದು ಮಾಗಿದ ಅಭಿನಯ. 2015ರಲ್ಲಿ ಶರತ್ ಕಠಾರಿಯಾ ನಿರ್ದೇಶನದಲ್ಲಿ ತೆರೆಕಂಡಿದ್ದ ‘ಧಮ್ ಲಗಾ ಕೆ ಹೈಸಾ’ ಚಿತ್ರದಲ್ಲಿನ ನಟನೆ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ರೊಮ್ಯಾಂಟಿಕ್ ಚಿತ್ರ ಭರ್ಜರಿ ಹಿಟ್ ಆಗಿತ್ತು.ಅದೇ ವರ್ಷ ಬಿಡುಗಡೆಗೊಂಡ ವಿಭು ಪುರಿ ನಿರ್ದೇಶನದ ‘ಹವಾಯಿಜಾದ’ ಚಿತ್ರದಲ್ಲೂ ಅವರ ಯಶಸ್ಸಿನ ಯಾನ ಮುಂದುವರಿಯಿತು.

2017ರ ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ‘ಬರೇಲಿ ಕಿ ಬರ್ಫಿ’, 2017ರ ಆರ್.ಎಸ್. ಪ್ರಸನ್ನ ನಿರ್ದೇಶನದ ‘ಶುಭ ಮಂಗಲ್ ಸಾವಧಾನ್’, 2018ರಲ್ಲಿ ಅಮಿತ್ ರವೀಂದ್ರನಾಥ್ ನಿರ್ದೇಶನದ ‘ಬದಾಯಿ ಹೊ’ ಚಿತ್ರಗಳಲ್ಲಿ ನಟಿಸುವುದರೊಂದಿಗೆ ತಾವು ಹಾಸ್ಯಪಾತ್ರಗಳ ನಟನೆಗೂ ಸಿದ್ಧ ಎಂಬುದನ್ನು ಸಾಬೀತುಪಡಿಸಿದರು.

2018ರಲ್ಲಿ ತೆರೆಕಂದ ಶ್ರೀರಾಮ್ ರಾಘವನ್ ನಿರ್ದೇಶನದ ಕ್ರೈಮ್, ಥ್ರಿಲ್ಲರ್ ಸಿನಿಮಾ ‘ಅಂಧಾದುನ್’ನಲ್ಲಿ ಆಯುಷ್ಮಾನ್ ಅಂಧನ ಪಾತ್ರದಲ್ಲಿ ನಟಿಸಿದ್ದರು. ಹಿರಿಯ ನಟಿ ಟಬು ಕೂಡ ಇದರಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದು ವಿಶೇಷ. ಅಂಧನಂತೆ ನಟಿಸುವ ಯುವಕನೊಬ್ಬ ತನ್ನ ಸುತ್ತಲೂ ನಡೆಯುವ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಾ ಕೊನೆಗೆ ತಾನೂ ಆ ಷಡ್ಯಂತ್ರದಲ್ಲಿ ಸಿಲುಕಿಕೊಳ್ಳುವುದೇ ಈ ಚಿತ್ರದ ಹೂರಣ. ಈ ಚಿತ್ರದಲ್ಲಿನ ನಟನೆಯು ಗಂಭೀರ ಪಾತ್ರಗಳಲ್ಲೂ ಅವರು ಮಿಂಚಬಲ್ಲರು ಎಂಬುದನ್ನು ಸಾಬೀತುಪಡಿಸಿತು.

ಪ್ರಸ್ತುತ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಜೊತೆಗೆ ಆಯುಷ್ಮಾನ್ ತೆರೆ ಹಂಚಿಕೊಂಡಿರುವ ‘ಗುಲಾಬೊ ಸಿತಾಬೊ’ ಚಿತ್ರ ನಿರ್ಮಾಣ ಹಂತದಲ್ಲಿದೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಸುಜಿತ್ ಸರ್ಕಾರ್. ಇದರಲ್ಲಿ ಅಮಿತಾಬ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.