'ಡಾಕ್ಟರ್ ಜೀ' ಸಿನೆಮಾದ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಟ ಆಯುಷ್ಮಾನ್ ಖುರಾನ ಅವರು ಚಿತ್ರವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿರುವ ಅವರು ಬಿಳಿ ಬಣ್ಣದ ಲ್ಯಾಬ್ ಕೋಟ್ ಮತ್ತು ಕಪ್ಪು ಫ್ರೇಮ್ ಹೊಂದಿರುವ ಕನ್ನಡಕವನ್ನು ಧರಿಸಿದ್ದಾರೆ. ಕೋಟ್ನ ಜೇಬಿನಲ್ಲಿ ಸ್ಟೆತಸ್ಕೋಪ್ ಮತ್ತು ಕೈಯಲ್ಲಿ ಪುಸ್ತಕವನ್ನು ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

'ಡಾಕ್ಟರ್ ಜೀ ತಯಾರಾಗಿಯೇ ಹೊರಬಂದಿದ್ದಾರೆ. ಈಗ ಶುರುವಾಗಲಿದೆ ಶೂಟಿಂಗ್' ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಪ್ರಯೋಗಾತ್ಮಕ ಪಾತ್ರಗಳಿಗೆ ಜೀವ ತುಂಬುದರಲ್ಲಿ ಆಯುಷ್ಮಾನ್ ಎತ್ತಿದ ಕೈ. ಕಿರುತೆರೆಯಲ್ಲಿ ಭವಿಷ್ಯದ ಹುಡುಕಾಟ ನಡೆಸಿದ್ದ ಅವರಿಗೆ ಬಾಲಿವುಡ್ನಲ್ಲಿ ಭದ್ರನೆಲೆ ಒದಗಿಸಿದ್ದು ‘ವಿಕ್ಕಿ ಡೋನರ್’ ಚಿತ್ರ. ಇದು ತೆರೆಕಂಡಿದ್ದು 2012ರಲ್ಲಿ. ಇದರಲ್ಲಿನ ವೀರ್ಯ ದಾನ ಮಾಡುವ ಯುವಕನ ಪಾತ್ರ ಪ್ರೇಕ್ಷಕರ ಮನ ಸೆಳೆದಿತ್ತು.

2013ರಲ್ಲಿ ರೋಹನ್ ಸಿಪ್ಪಿ ನಿರ್ದೇಶಿಸಿದ ‘ನೌಟಂಕಿ ಸಾಲಾ’, 2014ರಲ್ಲಿ ನೂಪುರ್ ಆಸ್ತಾನಾ ಆ್ಯಕ್ಷನ್ ಕಟ್ ಹೇಳಿದ ‘ಬೇವಕೂಫಿಯಾನ್’ ಸಿನಿಮಾದಲ್ಲೂ ಆಯುಷ್ಮಾನ್ ಅವರದು ಮಾಗಿದ ನಟನೆ. ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಶರತ್ ಕಠಾರಿಯಾ ನಿರ್ದೇಶಿಸಿದ ‘ಧಮ್ ಲಗಾ ಕೆ ಹೈಸಾ’ ಚಿತ್ರ. ಇದು ತೆರೆಕಂಡಿದ್ದು 2015ರಲ್ಲಿ.

2017ರಲ್ಲಿ ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ ‘ಬರೇಲಿ ಕಿ ಬರ್ಫಿ’, 2017ರಲ್ಲಿ ಆರ್.ಎಸ್. ಪ್ರಸನ್ನ ಆ್ಯಕ್ಷನ್ ಕಟ್ ಹೇಳಿದ ‘ಶುಭ ಮಂಗಲ್ ಸಾವಧಾನ್’, 2018ರಲ್ಲಿ ಅಮಿತ್ ರವೀಂದ್ರನಾಥ್ ನಿರ್ದೇಶಿಸಿದ ‘ಬದಾಯಿ ಹೊ’ ಸಿನಿಮಾಗಳಲ್ಲಿ ನಟಿಸುವ ಮೂಲಕ ತಾನು ಹಾಸ್ಯಪಾತ್ರಗಳಿಗೂ ಸೈ ಎನ್ನುವುದನ್ನು ಆಯುಷ್ಮಾನ್ ಸಾಬೀತುಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.