ಮೈಸೂರು: ಮೈಸೂರಿನ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ (ಮೇಣದ ಪ್ರತಿಮೆಗಳ ಜಾಗ) ಪ್ರದರ್ಶನಕ್ಕೆ ಇಡಲಾಗಿದ್ದ ಬಾಹುಬಲಿ ಮೇಣದ (ನಟ ಪ್ರಭಾಸ್ ಅವರನ್ನು ಹೋಲುವ) ಪ್ರತಿಮೆಯನ್ನು ಸೋಮವಾರ ತೆರವುಗೊಳಿಸಲಾಗಿದೆ.

ಇದಕ್ಕೆ ಕಾರಣ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ (Shobu Yarlagadda) ಅವರ ಆಕ್ಷೇಪ.

ಈಚೆಗೆ ಈ ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಪ್ರತಿಮೆಯ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದು ಬಹಳಷ್ಟು ಹರಿದಾಡಿತ್ತು. Prabhas Network ಎಂಬ X ಪೇಜ್ ಒಂದು ಈ ಚಿತ್ರವನ್ನು ಹಂಚಿಕೊಂಡಿತ್ತು.

ಇದನ್ನು ಗಮನಿಸಿದ ಬಾಹುಬಲಿ ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ‘ಇದು ಅಧಿಕೃತ ಕಲಾವಿದರು ಮಾಡಿರುವ ಪ್ರತಿಮೆಯಲ್ಲ, ಇದನ್ನು ಪ್ರದರ್ಶಿಸಲು ನಮ್ಮ ಅನುಮತಿಯೂ ಪಡೆದಿಲ್ಲ. ಅದನ್ನು ತೆಗೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಬಾಹುಬಲಿ ಚಲನಚಿತ್ರದ ನಿರ್ಮಾಪಕ ಮ್ಯೂಸಿಯಂಗೆ ಕರೆ ಮಾಡಿದ್ದರು. ಪ್ರತಿಮೆಯಲ್ಲಿನ ಬಟ್ಟೆಯ ಗುಣಮಟ್ಟ ಉತ್ತಮವಾಗಿಲ್ಲ. ನೀವು ನಮ್ಮಿಂದ ಅನುಮತಿಯೂ ಪಡೆದಿಲ್ಲ. ಹೀಗಾಗಿ ಅದನ್ನು ತೆರವುಗೊಳಿಸಬೇಕು ಎಂದು ಹೇಳಿದ್ದರು. ಅದರಂತೆ ನಾವು ತೆರವುಗೊಳಿಸಿದ್ದೇವೆ’ ಎಂದು ಮ್ಯೂಸಿಯಂನ ಸಿಬ್ಬಂದಿ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.