ಮುಂಬೈ: ಗೂಢಚರ್ಯೆಗೆ ಸಂಬಂಧಿಸಿದ ಥ್ರಿಲ್ಲರ್ ಕಥೆಯನ್ನು ಹೊಂದಿರುವ, ಹಿಂದಿಯ ‘ಬೆಲ್ ಬಾಟಮ್’ ಸಿನಿಮಾ ಚಿತ್ರೀಕರಣವು ಆಗಸ್ಟ್ನಲ್ಲಿ ಶುರುವಾಗಲಿದೆ. ಮೊದಲ ಹಂತದಲ್ಲಿ ಚಿತ್ರೀಕರಣವು ಬ್ರಿಟನ್ನಿನಲ್ಲಿ ನಡೆಯಲಿದೆ.

ಅಕ್ಷಯ್ ಕುಮಾರ್ ಮತ್ತು ವಾಣಿ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಂಜಿತ್ ಎಂ. ತಿವಾರಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರವು 1980ರ ಕಥೆಯನ್ನು ಹೇಳಲಿದೆ.

‘ನಾವು ಅತ್ಯುತ್ತಮವಾಗಿ ಮಾಡುವ ಕೆಲಸವನ್ನು ಮತ್ತೆ ಮಾಡಲು ಕಾತರಿಸುತ್ತಿದ್ದೇನೆ. ನಾವು ಕೆಲಸಕ್ಕೆ ಮರಳಬೇಕಾದ ಸಮಯ ಇದು. ಮುಂದಿನ ತಿಂಗಳಿನಿಂದ ಚಿತ್ರದ ಕೆಲಸ ಶುರುವಾಗಲಿದೆ’ ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ.

ಚಿತ್ರೀಕರಣದ ಕೆಲಸಗಳಲ್ಲಿ ಪಾಲ್ಗೊಳ್ಳಲು ಹುಮಾ ಖುರೇಷಿ ಮತ್ತು ಲಾರಾ ದತ್ತಾ ಅವರೂ ಬರಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಅಸೀಂ ಅರೋರಾ ಮತ್ತು ಪರ್ವೀಜ್ ಶೇಖ್ ಅವರು ಈ ಚಿತ್ರದ ಕಥೆ ಸಿದ್ಧಪಡಿಸಿದ್ದಾರೆ. 2021ರ ಏಪ್ರಿಲ್ 2ರಂದು ಚಿತ್ರವನ್ನು ತೆರೆಯ ಮೇಲೆ ತರಬೇಕು ಎಂಬ ಉದ್ದೇಶ ಚಿತ್ರತಂಡದ್ದು.

ಲಾಕ್ಡೌನ್ ನಂತರ ಚಿತ್ರೀಕರಣದ ಪುನರಾರಂಭದ ಸುದ್ದಿಯನ್ನು ನೀಡುತ್ತಿರುವ ಮೊದಲ ಚಿತ್ರತಂಡಗಳ ಸಾಲಿನಲ್ಲಿ ಬೆಲ್ ಬಾಟಂ ಕೂಡ ಸೇರಿದೆ. ‘ಮುಂಬೈ ಸಾಗಾ’ ಚಿತ್ರದ ಚಿತ್ರೀಕರಣವು ಈ ತಿಂಗಳಲ್ಲಿ ಹೈದರಾಬಾದ್ನಲ್ಲಿ ಶುರುವಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.