ಮಕ್ಕಳ ಕಲಿಕಾ ತಂತ್ರಾಂಶ ವಿಸ್ತಾಸ್ ಲರ್ನಿಂಗ್ ಆ್ಯಪ್ಗೆ ನಟಿ ಭಾರತಿ ವಿಷ್ಣುವರ್ಧನ್ ರಾಯಭಾರಿಯಾಗಿದ್ದಾರೆ.

ಈ ಆ್ಯಪ್ ಬಿಡುಗಡೆ ಮಾಡಿದ ಭಾರತಿ, ಈ ಆ್ಯಪ್ನಲ್ಲಿ ನನ್ನನ್ನು ಆಕರ್ಷಿಸಿದ್ದು ‘ವಿ’ ಅಕ್ಷರ. ಅದರಲ್ಲಿ ತುಂಬಾ ಅರ್ಥಗಳಿವೆ. ವಿಷ್ಣುವರ್ಧನ್ ಅವರಿಗೂ ಶಿಕ್ಷಣದ ಬಗ್ಗೆ ತುಂಬಾ ಕಾಳಜಿ ಇತ್ತು. ಎಷ್ಟೋ ವಿದ್ಯಾರ್ಥಿಗಳಿಗೆ ಅವರು ನೆರವಾಗಿದ್ದಾರೆ ಎಂದು ಸ್ಮರಿಸಿದರು.

‘ನಾನು ಕೂಡ ಡಿಗ್ರಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ಅದು ಆಗಿರಲಿಲ್ಲ. ಮಧ್ಯಮವರ್ಗದ ಜನರಿಗೆ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿರುತ್ತದೆ. ದುಬಾರಿ ಶಿಕ್ಷಣದ ಕಾರಣದಿಂದ ಸಾಧ್ಯವಾಗಿರುವುದಿಲ್ಲ. ಅದನ್ನು ಅರ್ಜುನ್ ಅವರು ಸುಲಭ ಮಾಡಿಕೊಡಲು ಹೊರಟಿದ್ದಾರೆ. ಈ ಆಪ್ ಬಗ್ಗೆ ನನ್ನಲ್ಲೂ ನೂರಾರು ಪ್ರಶ್ನೆಗಳಿದ್ದವು. ಅದಕ್ಕೆಲ್ಲ ಇವರು ಉತ್ತರಿಸಿದ್ದಾರೆ. ನಮ್ಮಿಂದ ಒಂದಷ್ಟು ಜನರಿಗೆ ಪ್ರೇರಣೆಯಾಗುತ್ತದೆ ಎಂದರೆ ಆ ಸಂತೋಷವೇ ಬೇರೆ. ಇದರಿಂದ ಎಲ್ಲರಿಗೂ ಅನುಕೂಲ ಆಗಲಿ ಅನ್ನುವುದೇ ನನ್ನಾಸೆ. ಅದಕ್ಕಾಗೇ ನಾನಿಲ್ಲಿದ್ದೇನೆ’ ಎಂದರು ಭಾರತಿ.

ಚಿಕ್ಕಮಗಳೂರು ಮೂಲದ ಅರ್ಜುನ್ ಸಾಮ್ರಾಟ್ ಅವರು ಕನಿಷ್ಠ ಬೆಲೆಗೆ ಈ ಆ್ಯಪನ್ನು ರೂಪಿಸಿದ್ದಾರೆ. 2018ರಿಂದ 1,800 ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡಿದ್ದಾರೆ. 1ರಿಂದ 12ನೇ ತರಗತಿವರೆಗೆ ಅನಿಮೇಷನ್ ವೀಡಿಯೋ ಸಹಿತ ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿ ದಕ್ಷಿಣ ಭಾರತದ ಪ್ರಮುಖ ಬಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. ಕಾರ್ಯಕ್ರಮದಲ್ಲಿ ಸಿ.ಎಸ್.ಅರವಿಂದ್, ಅಶೋಕ್ ಜೈನ್, ಭಾರ್ಗವಿ ಗೋಪಿನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.