‘ರಾಮಾ ರಾಮಾ ರೇ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ನಟಿ ಬಿಂಬಶ್ರೀ ನೀನಾಸಂ ಅವರು, ಒಂದಿಷ್ಟು ‘ಪ್ರಬುದ್ಧ ಪಾತ್ರಗಳ’ ಮೂಲಕ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆದರೆ, ಅವರು ಈವರೆಗಿನ ಹಾದಿಯಲ್ಲಿ ಸಿಕ್ಕಿದ್ದಕ್ಕಿಂತ ಭಿನ್ನವಾದ ಪಾತ್ರಗಳ ಹುಡುಕಾಟದಲ್ಲಿ ಈಗ ತೊಡಗಿದ್ದಾರೆ.

‘ನಾನು ಒಂದಿಷ್ಟು ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸಬೇಕು. ನನ್ನ ಮೊದಲ ಸಿನಿಮಾದಲ್ಲಿ ಸಿಕ್ಕಿದ್ದ ಪಾತ್ರ ಗ್ಲಾಮರ್ ಇಲ್ಲದ್ದಾಗಿತ್ತು. ಹಾಗಾಗಿ ಎಲ್ಲರೂ ನನ್ನನ್ನು ಬಹಳ ಮೆಚ್ಯೂರ್ ಪಾತ್ರಗಳನ್ನು ಮಾತ್ರ ನಿಭಾಯಿಸುವ ನಟಿ ಎಂದು ಭಾವಿಸಿಬಿಟ್ಟಿದ್ದಾರೆ. ಜನ ನನ್ನನ್ನು ಗ್ಲಾಮರಸ್ ಆಗಿಯೂ, ರಫ್ ಆ್ಯಂಡ್ ಟಫ್ ಆಗಿಯೂ ನೋಡಲಿ ಎಂಬುದು ನನ್ನ ಬಯಕೆ’ ಎಂದರು ಬಿಂಬಶ್ರೀ.

‘ಗ್ಲಾಮಸರ್ ಆಗಿ ಕಾಣಿಸಿಕೊಳ್ಳಬೇಕು’ ಎಂಬ ಇಂಗಿತವನ್ನು ವ್ಯಕ್ತಪಡಿಸಿದ ತಕ್ಷಣ ಇನ್ನೊಂದು ಮಾತನ್ನು ಮರೆಯದೆ ಸೇರಿಸುತ್ತಾರೆ ಇವರು. ‘ಗ್ಲಾಮರ್ ಅಂದರೆ ಎಕ್ಸ್ಪೋಸ್ ಅಲ್ಲ’ ಎಂಬುದು ಆ ಮಾತು.

ತಾವು ಗ್ಲಾಮರಸ್ ಪಾತ್ರಗಳನ್ನೂ ನಿಭಾಯಿಸಲು ಸಿದ್ಧ ಎನ್ನುವ ಸಂದೇಶ ರವಾನಿಸಲು ಬಿಂಬಶ್ರೀ ಅವರು ಒಂದು ಫೊಟೊಶೂಟ್ ಮಾಡಿಸಲು ಎಲ್ಲ ಸಿದ್ಧತೆ ನಡೆಸಿದ್ದರಂತೆ. ಆದರೆ, ಕೊರೊನಾ ತಂದಿಟ್ಟ ಲಾಕ್ಡೌನ್ ಪರಿಣಾಮವಾಗಿ ಆ ಫೋಟೊಶೂಟ್ ಮುಂದಕ್ಕೆ ಹೋಗಿದೆಯಂತೆ.

ಸಿನಿಮಾ ಕೆಲಸಗಳ ನಡುವೆ ಬಿಂಬಶ್ರೀ ಅವರು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಅಭಿನಯಿಸುವ ಕೆಲಸವನ್ನೂ ಆರಂಭಿಸಿದ್ದಾರೆ. ಹಾಗೆಯೇ, ನಟನೆಯ ಪಾಠಗಳನ್ನು ಹೇಳಿಕೊಡುವ ಕೆಲಸವನ್ನೂ ಶುರು ಮಾಡಿದ್ದಾರೆ. ಆದರೆ, ಲಾಕ್ಡೌನ್ ಈ ಕೆಲಸವನ್ನು ತಾತ್ಕಾಲಿಕವಾಗಿ ಲಾಕ್ ಮಾಡಿಸಿದೆ. ‘ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕೆಲಸ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದೆ. ಆದರೆ, ಈಗ ಅದನ್ನೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇನೆ. ಹಾಗೆ ಮಾಡೆಲ್ ಆಗಿ ಕೆಲಸ ಮಾಡಿದಾಗ ಒಂದಿಷ್ಟು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಸಿನಿಮಾ ಉದ್ಯಮದಲ್ಲಿ ಇರುವ ಹಲವರು ಮಾಡೆಲಿಂಗ್ ಕ್ಷೇತ್ರದಿಂದಲೇ ಬಂದವರು’ ಎಂದು ಬಿಂಬಶ್ರೀ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.