ಇಂಟರ್ನೆಟ್ ಸೆನ್ಸೇಷನ್, ದಿನ ಬೆಳಗಾಗುವಷ್ಟರಲ್ಲಿ ಇಂಟರ್ನೆಟ್ನಲ್ಲಿ ಸಿಂಗಿಂಗ್ ಸ್ಟಾರ್ ಎಂಬ ಪಟ್ಟ ಗಿಟ್ಟಿಸಿಕೊಂಡ ರಾನು ಮಂಡಲ್ ಬಗ್ಗೆ ಸದ್ಯದಲ್ಲೇ ಬಂಗಾಳಿ ಭಾಷೆಯಲ್ಲಿ ಬಯೋಪಿಕ್ ತಯಾರಾಗಲಿದೆ.

ಈ ಚಿತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುದೀಪ್ತ ಚಕ್ರವರ್ತಿ ಅವರು ರಾನು ಮಂಡಲ್ ಪಾತ್ರ ನಿರ್ವಹಿಸಲಿದ್ದಾರೆ.

ಕೋಲ್ಕತ್ತದ ರೈಲ್ವೆ ಪ್ಲಾಟ್ಫಾರಂನಲ್ಲಿ ಹಾಡುತ್ತಿದ್ದ ರಾನು ಮಂಡಲ್ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಿನ್ನೆಲೆ ಗಾಯಕ ಹಿಮೇಶ್ ರೇಶಾಮಿಯಾ ಅವರು ತಮ್ಮ ‘ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್’ ಚಿತ್ರದ ಹಾಡೊಂದನ್ನು ಅವರಿಂದ ಹಾಡಿಸಿದ್ದು, ಇನ್ನೂ ಕೆಲವು ಹಾಡುಗಳನ್ನು ಹಾಡಲಿದ್ದಾರೆ.

ಈಗ ಬಂಗಾಳಿ ಸಿನಿಮಾ ನಿರ್ಮಾಪಕ ಹೃಷಿಕೇಶ ಮಂಡಲ್ ರೈಲ್ವೆ ಪ್ಲಾಟ್ಫಾರಂನಿಂದ ಬಾಲಿವುಡ್ ತನಕದ ಅವರ ಜೀವನಕತೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೃಷಿಕೇಶ ಮಂಡಲ್ ಈ ಸುದ್ದಿಯನ್ನು ಸ್ಪಷ್ಟಪಡಿಸಿದ್ದು, ಈ ಸಿನಿಮಾದ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಅವರು ಸುದೀಪ್ತ ಚಕ್ರವರ್ತಿ ಜೊತೆ ರಾನು ಮಂಡಲ್ ಪಾತ್ರಕ್ಕೆ ಮಾತುಕತೆ ನಡೆಸಿದ್ದಾರೆ. ಅವರು ಈ ಚಿತ್ರಕ್ಕೆ ಒಪ್ಪಿಗೆ ನೀಡಬೇಕಷ್ಟೇ.
‘ನನಗೆ ಇನ್ನೂ ಚಿತ್ರದ ಚಿತ್ರಕತೆ ಓದಲು ಸಿಕ್ಕಿಲ್ಲ. ಓದಿದ ಬಳಿಕ ನಾನು ಆ ಪಾತ್ರವನ್ನು ಮಾಡಬೇಕಾ ಬೇಡವೇ ಎಂದು ನಿರ್ಧರಿಸುತ್ತೇನೆ’ ಎಂದು ಸುದೀಪ್ತ ತಿಳಿಸಿದ್ದಾರೆ.

ರಾನು ಮಂಡಲ್ಗೆ ಸ್ಟಾರ್ಪಟ್ಟ ಸಿಗಲು ಸಾಮಾಜಿಕ ಜಾಲತಾಣಗಳೇ ಕಾರಣ. ಹಾಗಾಗಿ ಈ ಸಿನಿಮಾದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಾಮುಖ್ಯತೆಗೂ ಹೆಚ್ಚು ಒತ್ತು ನೀಡಲಾಗುತ್ತದೆ. ಜನರಿಗೆ ರಾನು ಮಂಡಲ್ ಜೀವನದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿಯಿದೆ. ಇದೆಲ್ಲವೂ ಸಿನಿಮಾದಲ್ಲಿ ಒಳಗೊಳ್ಳಲಿದೆ ಎಂದು ಹೃಷಿಕೇಶ ತಿಳಿಸಿದ್ದಾರೆ.

ಇದನ್ನೂ ಓದಿ: ಭಿಕ್ಷೆಗಾಗಿ ಹಾಡುತ್ತಿದ್ದ ರಾನು ಮಂಡಲ್ ಯುಟ್ಯೂಬ್ ಟಾಪ್ ಟ್ರೆಂಡಿಂಗ್ನಲ್ಲಿ...

ಈ ಚಿತ್ರದಲ್ಲಿ ರಾನು ಮಂಡಲ್ ಸಹ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 2020ರ ಫೆಬ್ರುವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.