ಸ್ವಾತಂತ್ರ್ಯೋತ್ಸವ ಸಂಭ್ರಮದ ಜತೆಗೆ ದೇಶ, ವಿದೇಶಗಳ 400ಕ್ಕೂ ಹೆಚ್ಚು ಸದಭಿರುಚಿಯ ಕಿರುಚಿತ್ರಗಳನ್ನು ವೀಕ್ಷಿಸುವ ಅವಕಾಶ ನಗರದ ಚಿತ್ರರಸಿಕರಿಗೆ ಕೂಡಿ ಬಂದಿದೆ.

ನಾಲ್ಕು ದಿನಗಳ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರಗಳ ಉತ್ಸವಕ್ಕೆ (ಬಿಐಎಸ್ಎಫ್ಎಫ್)ಇದೇ 15ರಂದು ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಚಾಲನೆ ಸಿಗಲಿದೆ. ಈ ಉತ್ಸವದಲ್ಲಿ 50 ರಾಷ್ಟ್ರಗಳ 65ಕ್ಕೂ ಹೆಚ್ಚು ಭಾಷೆಗಳ ವೈವಿಧ್ಯಮಯ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿದ್ದು,50ಕ್ಕೂ ಹೆಚ್ಚು ಚಿತ್ರ ತಯಾರಕರು ಭಾಗವಹಿಸಲಿದ್ದಾರೆ.

ಅದಷ್ಟೇ ಅಲ್ಲಕಿರುಚಿತ್ರಗಳ ಭವಿಷ್ಯ, ಸವಾಲು ಮತ್ತುಸ್ಕ್ರಿಪ್ಟ್ ರಚನೆ ಕುರಿತು ಕಾರ್ಯಾಗಾರ, ಸಂವಾದ ಸಿನಿರಸಿಕರ ಆಸಕ್ತಿಯನ್ನು ತಣಿಸಲಿವೆ. ಜತೆಗೆ ಉದಯೋನ್ಮುಖ ಚಿತ್ರ ತಯಾರಕರಿಗೆ ಸೂಕ್ತ ವೇದಿಕೆ ಒದಗಿಸಲಿದೆ.

ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ, ದೊಮ್ಮಲೂರು 2ನೇ ಹಂತದಲ್ಲಿರುವ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಮತ್ತು ಇಂದಿರಾ ನಗರ ಮೊದಲ ಹಂತದಲ್ಲಿರುವ ಮ್ಯಾಕ್ಸ್ ಮುಲ್ಲರ್ ಭವನದ ಐದು ಸ್ಕ್ರೀನ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ನಾಲ್ಕು ದಿನವೂ ಅಂತರರಾಷ್ಟ್ರೀಯ ಚಿತ್ರಗಳ ಜತೆ ಭಾರತೀಯ ಮತ್ತು ಕನ್ನಡದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಈಗ ನಡೆಯುತ್ತಿರುವುದು 9ನೇ ಆವೃತ್ತಿಯ ಚಿತ್ರೋತ್ಸವ. ಈ ವರೆಗೆ ನಡೆದ ಎಂಟು ಉತ್ಸವಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ಬಾರಿಯೂ ವಿಭಿನ್ನ ವಸ್ತು ಮತ್ತು ವಿಷಯಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆಎಂದು ಆಯೋಜಕರು ‘ಮೆಟ್ರೊ’ಗೆ ಉತ್ಸವದ ರೂಪುರೇಷೆ ತಿಳಿಸಿದರು.

ಕಳೆದ ಚಿತ್ರೋತ್ಸವಕ್ಕೆ ರೋಮಾನ್ಸ್ ಮತ್ತು ಹಾಸ್ಯ ಪ್ರಧಾನವಾದ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ವೆಬ್ ಸರಣಿ ಚಿತ್ರಗಳು, ವಿಜ್ಯುವಲ್ ಸ್ಪೇಷಲ್ ಎಫೆಕ್ಟ್ಸ್ (ವಿಎಫ್ಎಕ್ಸ್) ಅವಕಾಶಗಳ ಬಗ್ಗೆ ಚರ್ಚಿಸಲಾಗಿತ್ತು.ಈ ಬಾರಿ ಹಾರರ್ ಮತ್ತು ಸಂಗೀತ ಪ್ರಧಾನ ಚಿತ್ರಗಳಿಗೆ ಒತ್ತು ನೀಡಲಾಗಿದೆ.

ಕಿರುಚಿತ್ರಗಳನ್ನು ಅಂತರರಾಷ್ಟ್ರೀಯ, ಭಾರತ ಮತ್ತು ಕರ್ನಾಟಕ ಎಂದು ಹಲವು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಂತರರಾಷ್ಟ್ರೀಯ ವಿಭಾಗದಲ್ಲಿ ಘಾನಾ, ಜಾರ್ಜಿಯಾ ಮತ್ತು ಉಜ್ಬೇಕಿಸ್ತಾನ್ ಚಿತ್ರಗಳು ಸ್ಪರ್ಧೆಯಲ್ಲಿದ್ದರೆ,ಕರ್ನಾಟಕ ವಿಭಾಗದಲ್ಲಿ 10ಕ್ಕೂ ಹೆಚ್ಚು ಕನ್ನಡ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅತ್ಯುತ್ತಮ ಫಿಲ್ಮ್ ಪ್ಯಾಕೇಜ್ ವಿಭಾಗದಲ್ಲಿ ಎನಿಮೇಷನ್, ಪಾಕೆಟ್ ಫಿಲ್ಮ್ಸ್, ಜರ್ಮನಿಯ ಗೆರ್ಟಾ ಎಕ್ಸ್ಪೋರ್ಟ್ ಕಿರುಚಿತ್ರಗಳು ಮತ್ತು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕಿರುಚಿತ್ರಗಳು ಚಿತ್ರರಸಿಕರನ್ನು ರಂಜಿಸಲಿವೆ.

ಕನ್ನಡ ಡಿಂಡಿಮ

ಈ ಬಾರಿ ಕನ್ನಡದ ಅನೇಕ ಕಿರುಚಿತ್ರಗಳು ಉತ್ಸವದಲ್ಲಿ ಪ್ರದರ್ಶನ ಕಾಣುತ್ತಿವೆ.

1973, ಅನಾಮಧೇಯ ಅಪ್ಪಯಮ್ಮ, ಬಾಗಿಲನು ತೆರೆದು–1, ಭೂತ ಮಿಸ್ಸಿಂಗ್, ಬರ್ಮಾ ಎಕ್ಸ್ಪ್ರೆಸ್, ಹೊನ್ನು ಬಿತ್ತ್ಯಾರೊ, ಲಚ್ಚವ್ವ, ಮೂಢ, ಮೌನ, ನಾಸ್ತಿ, ಪಡುವಾರಹಳ್ಳಿ, ಪ್ಲಾನ್ ಬಿ, ರೂಪಾಂತರ, ದ ರೆಡೆಮ್ಶನ್ ಚಿತ್ರಗಳು ಕರ್ನಾಟಕ ವಿಭಾಗದಲ್ಲಿವೆ.

ಯುವ ಫಿಲ್ಮ್ಮೇಕರ್ಗಳಾದ ದೇವಾಶಿಶ್ ಮಖಿಜಾ, ಆದರ್ಶ್ ಈಶ್ವರಪ್ಪ, ರೋಹಿತ್ ಪದಕಿ, ಜೈಶಂಕರ್, ನರೇಶ್ ಹೆಗ್ಡೆ, ನವೀನ್ ತೇಜಸ್ವಿ, ಭರತ್ ಎಂ.ಸಿ. ಮತ್ತು ಶಶಾಂಕ್ ಸೋಘಾಲ್ ಈ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಯುವ ಪ್ರತಿಭೆಗಳಿಗೆ ವೇದಿಕೆ

ಉತ್ಸವದಲ್ಲಿ ಪ್ರದರ್ಶನ ಮತ್ತು ಸ್ಪರ್ಧೆಗಾಗಿ ಒಟ್ಟು 3,200 ಕಿರುಚಿತ್ರಗಳು ಬಂದಿದ್ದವು. ಆ ಪೈಕಿ ಅತ್ಯುತ್ತಮ ಸ್ಕ್ರಿಪ್ಟ್ ಆಧಾರದ ಮೇಲೆ 400ಕ್ಕೂ ಹೆಚ್ಚು ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.

ಕಿರುಚಿತ್ರ ತಯಾರಕರ ವಲಯ ಮತ್ತು ಅವಕಾಶ ಸೀಮಿತವಾಗಿವೆ. ಇಂತದೊಂದು ಸಾಹಸಕ್ಕೆ ಕೈ ಹಾಕುತ್ತಿರುವ ಯುವ ಸಮೂಹಕ್ಕೆ ಡಿಜಿಟಲ್ ಪ್ಲಾಟ್ಫಾರ್ಮ್ ಬಿಟ್ಟರೆ ಬೇರೆ ವೇದಿಕೆ, ಅವಕಾಶ ಸಿಗುತ್ತಿಲ್ಲ. ಅವರಿಗೆ ಸೂಕ್ತ ವೇದಿಕೆ ಒದಗಿಸುವ ಕುರಿತು ಚರ್ಚೆಗೆ ಉತ್ಸವ ನಾಂದಿ ಹಾಡಲಿದೆ ಎನ್ನುವುದು ಆಯೋಜಕರ ಆಶಯ.

ಬಿಐಎಸ್ಎಫ್ಎಫ್ ಉತ್ಸವ ಉದ್ಘಾಟನೆ
ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ 2ನೇ ಹಂತ

ದಿನಾಂಕ: ಆಗಸ್ಟ್ 15

ಸಮಯ: ಸಂಜೆ 5.30

ಅತಿಥಿ: ನಟ ಉಪೇಂದ್ರ

ಪ್ರತಿನಿಧಿ ಶುಲ್ಕ: ₹600

ವಿದ್ಯಾರ್ಥಿಗಳು/ಹಿರಿಯ
ನಾಗರಿಕರ ಪಾಸ್: ₹400

ನೋಂದಣಿ ಮತ್ತು ಟಿಕೆಟ್ :www.bisff.in./ಬುಕ್ ಮೈ ಶೋ

ಸಂಪರ್ಕ: 7996290098

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.