‘ಚೇಂಜ್ ವಿತ್‌ಇನ್’ ಎಂಬ ವಿಡಿಯೊ ಬಿಡುಗಡೆಗೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಶಾರುಕ್ ಖಾನ್ ಮತ್ತು ಅಮಿರ್ ಖಾನ್ ತೆಗೆಸಿಕೊಂಡಿದ್ದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ದಕ್ಷಿಣಭಾರತ ಸಿನಿಮಾ ಮಂದಿ ಗರಂ ಆಗಿದ್ದಾರೆ.

ರಾಮ್‌ಚರಣ್ ತೇಜ್ ಅವರ ಪತ್ನಿ ಉಪಾಸನಾ ಕೊನಿಡೆಲ್ಲಾ ಈ ಬಗ್ಗೆ ಬರೆದುಕೊಂಡಿದ್ದು, ‘ಸನ್ಮಾನ್ಯ ನರೇಂದ್ರ ಮೋದಿ ಜಿ. ದಕ್ಷಿಣ ಭಾರತೀಯರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ ಮತ್ತು ನಿಮ್ಮನ್ನು ಪ್ರಧಾನಿಯಾಗಿ ಪಡೆದಿರುವುದಕ್ಕೆ ಹೆಮ್ಮೆ ಹೊಂದಿದ್ದಾರೆ. ಗೌರವಪೂರ್ವವಾಗಿ ನಿಮಗೆ ಹೇಳುವುದೇನೆಂದರೆ, ಚೇಂಜ್ ವಿತ್‌ಇನ್ ಕಾರ್ಯಕ್ರಮಕ್ಕೆ ಆಹ್ವಾನಿಸಿರುವ ವ್ಯಕ್ತಿಗಳು, ಸಾಂಸ್ಕೃತಿಕ ಕ್ಷೇತ್ರದ ಸಾಧಕರು ಕೇವಲ ಹಿಂದಿ ಕಲಾವಿದರಿಗೆ ಸೀಮಿತವಾಗಿದೆ. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯನ್ನು ಕಡೆಗಣಿಸಲಾಗಿದೆ. ನಾನು ನನ್ನ ನೋವನ್ನು ಹಂಚಿಕೊಂಡಿದ್ದೇನೆ. ಇದನ್ನು ಉತ್ತಮ ರೀತಿಯಲ್ಲಿಯೇ ತೆಗೆದುಕೊಳ್ಳುತ್ತೀರಾ ಎಂದು ಭಾವಿಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಖುಷ್ಬು ಸಹ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಉಪಾಸನ ಅವರ ಹೇಳಿಕೆಗೆ ಸಹಮತಿ ವ್ಯಕ್ತಪಡಿಸಿದ್ದಾರೆ. ‘ಚೇಂಜ್ ವಿತ್‌ಇನ್ ಕಾರ್ಯಕ್ರಮ ಅದಾಗಿದ್ದು, ಸಿನಿಮಾ ರಂಗದಲ್ಲಿ ಬದಲಾವಣೆಯಾದರೆ ಸಮಾಜದಲ್ಲಿಯೂ ಬದಲಾವಣೆ ಸಾಧ್ಯ ಎನ್ನುವ ಆಶಯದೊಂದಿಗೆ ಆ ಕಾರ್ಯಕ್ರಮಕ್ಕೆ ನಟರನ್ನು ಆಹ್ವಾನಿಸಲಾಗಿದೆ. ಆ ರೀತಿ ಯೋಚಿಸಿದರೆ ದಕ್ಷಿಣದಿಂದಲೇ ಅತ್ಯುತ್ತಮ ಸಿನಿಮಾಗಳು ಸಿದ್ಧವಾಗಿವೆ. ಹಿಂದಿ ಸಿನಿಮಾಗಳೊಂದೆ ಈ ದೇಶವನ್ನು ಪ್ರತಿನಿಧಿಸುವುದಿಲ್ಲ. ಈ ದೇಶದ ದೊಡ್ಡ ಸಿನಿಮಾರಂಗವೆಂದರೆ ಅದು, ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರೀಸ್. ಆದರೆ, ಇಲ್ಲಿಂದ ಯಾರೊಬ್ಬರನ್ನು ಆಹ್ವಾನಿಸಿಲ್ಲ’ ಎಂದು ಟೀಕಿಸಿದ್ದಾರೆ.

ಇದರಲ್ಲಿ ಪ್ರಧಾನಿಯ ಅವರ ತಪ್ಪಿಲ್ಲ. ಜೊತೆಯಲ್ಲಿದ್ದವರು ಅವರ ಗಮನಕ್ಕೆ ಇದನ್ನು ತರಬೇಕಿತ್ತು. ಇದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಲಕ್ಷ್ಯ. ಅವರು ದಕ್ಷಿಣ, ಪಂಜಾಬ್, ಮರಾಠಿ ಮತ್ತು ಬೆಂಗಾಲಿ ಸಿನಿಮಾಗಳಲ್ಲಿ ಪ್ರಮುಖರಿಗೆ ಆಹ್ವಾನ ನೀಡಬೇಕಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.