ಲಾಲ್ ಸಿಂಗ್ ಚಡ್ಡಾ ಸಿನಿಮಾ ವಿಮರ್ಶೆ: ದೊಡ್ಡ ಕಾಲಕ್ಷೇಪ, ಮನುಷ್ಯತ್ವದ ಓಟ
ಪುಕ್ಕವೊಂದು ಗಾಳಿಯಾಡಿದತ್ತ ತೇಲುತ್ತಾ ಕಥೆಯನೊರೆದು ಸಾಗಿತು. ಪುಕ್ಕಕ್ಕೆ ತಾನೆಲ್ಲಿಗೆ ಸಾಗಬೇಕೆಂಬ ನಿಶ್ಚಿತತೆ ಇಲ್ಲ. ಅದು ಬಂದು ಸೇರುವುದು ಅದರಂಥದ್ದೇ ಜಾಯಮಾನದ ನಾಯಕ ಕುಳಿತ ರೈಲಿನ ಸೀಟಿಗೆ. ಆ ಗರಿಯನ್ನು ಪುಸ್ತಕದ ಪುಟಗಳ ನಡುವೆ ಸೇರಿಸುವ ನಾಯಕ, ನಿಸ್ಸಂಕೋಚವಾಗಿ ತನ್ನ ಬದುಕಿನ ಪುಟಗಳ ಕಥೆಗಳನ್ನು ರೈಲು ಬೋಗಿಯಲ್ಲಿ ಕುಳಿತವರಿಗೆ ಒಂದೊಂದಾಗಿ ಹೇಳತೊಡಗುತ್ತಾನೆ. ಕಥೆ ಹೇಳಿ ಮುಗಿದ ಮೇಲೆ ಪುಸ್ತಕದಿಂದ ಗರಿ ಜಾರಿ ಕೆಳಗೆ ಬೀಳುತ್ತದೆ. ಅದು ಹಾರುವುದು ಇನ್ನೆಲ್ಲಿಗೋ...ಆ ಗರಿಯೇ ಇಡೀ ತೆರೆಯ ಆವರಿಸಿಕೊಳ್ಳುವುದರ ಮೂಲಕ ಕಥೆ ಅಂತ್ಯಗೊಂಡು, ಮನದಿ ಉಳಿದ ಪ್ರಶ್ನೆಗಳು ಆರಂಭವೊಂದನ್ನು ಮೂಡಿಸುತ್ತವೆ.Last Updated 11 ಆಗಸ್ಟ್ 2022, 11:41 IST