ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2025ರ ಆಸ್ಕರ್‌ಗೆ ಕಿರಣ್ ರಾವ್ ನಿರ್ದೇಶನದ 'ಲಾಪತಾ ಲೆಡೀಸ್' ಲಗ್ಗೆ

'ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ' ವಿಭಾಗಕ್ಕೆ ಆಯ್ಕೆ
Published : 23 ಸೆಪ್ಟೆಂಬರ್ 2024, 10:02 IST
Last Updated : 23 ಸೆಪ್ಟೆಂಬರ್ 2024, 10:02 IST
ಫಾಲೋ ಮಾಡಿ
Comments

ಚೆನ್ನೈ: 2025ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಸ್ಪರ್ಧಿಸಲು ಬಾಲಿವುಡ್‌ನ ‘ಲಾಪತಾ ಲೆಡೀಸ್‌’ ಸಿನಿಮಾ ಅಧಿಕೃತವಾಗಿ ಪ್ರವೇಶ ಪಡೆದಿದೆ.

ಕಿರಣ್‌ ರಾವ್ ನಿರ್ದೇಶನದ ಈ ಸಿನಿಮಾ ಇದೇ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಗೊಂಡಿತ್ತು.

ಅಸ್ಸಾಮಿ ನಿರ್ದೇಶಕ ಜಾನು ಬರುವಾ ನೇತೃತ್ವದ 13 ಸದಸ್ಯರ ಆಯ್ಕೆ ಸಮಿತಿಯು, ಆಯ್ದ 29 ಚಿತ್ರಗಳ ಪೈಕಿ ‘ಲಾಪತಾ ಲೆಡೀಸ್‌’ ಚಿತ್ರವನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ‘ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ’ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ ಎಂದು ಫಿಲ್ಮ್‌ ಫೆಡರೇಷನ್ ಆಫ್‌ ಇಂಡಿಯಾ ತಿಳಿಸಿದೆ.

ಬಾಲಿವುಡ್‌ನ ‘ಶ್ರೀಕಾಂತ್’, ತಮಿಳಿನ ‘ವಾಝೈ’ ಮತ್ತು ‘ತಂಗಲಾನ್’, ಮಲಯಾಳಂನ ‘ಉಳ್ಳೊಝುಕ್ಕು’ ಚಿತ್ರಗಳು ಆಯ್ದ 29 ಚಿತ್ರಗಳ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದಿವೆ.

ಪುರುಷ ಪ್ರಧಾನ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸಿರುವ ‘ಲಾಪತಾ ಲೆಡೀಸ್‌’, ಅಪ್ಪಟ ಗ್ರಾಮೀಣ ಸೊಗಡಿನ ಚಿತ್ರವಾಗಿದೆ. ರೈಲು ಪ್ರಯಾಣದ ವೇಳೆ ಇಬ್ಬರು ವಧುಗಳು ಅದಲುಬದಲಾಗುವುದರಿಂದ ಚಿತ್ರದ ಕಥೆ ಮುಂದುವರಿಯುತ್ತದೆ.

ರವಿ ಕಿಶನ್, ನಿತಾಂಶಿ ಗೋಯಲ್, ಪ್ರತಿಭಾ ರತ್ನಾ, ಸ್ಪರ್ಶ ಶ್ರಿವಾಸ್ತವ ನಟಿಸಿರುವ ಈ ಚಿತ್ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡು ಮೆಚ್ಚುಗೆಗೆ ಪಾತ್ರವಾಗಿತ್ತು.

‘ಆಸ್ಕರ್ ಪ್ರಶಸ್ತಿಗೆ ನನ್ನ ಸಿನಿಮಾ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ’ ಎಂದು ನಿರ್ದೇಶಕಿ ಕಿರಣ್‌ ರಾವ್ ಹೇಳಿದ್ದಾರೆ.

ಕಳೆದ ವರ್ಷ ಫಿಲ್ಮ್‌ ಫೆಡರೇಷನ್‌ ಆಫ್‌ ಇಂಡಿಯಾ ವತಿಯಿಂದ ಮಲಯಾಳಂನ ‘2018– ಎವರಿವನ್‌ ಇಸ್‌ ಎ ಹೀರೊ’ ಸಿನಿಮಾವನ್ನು ಕಳುಹಿಸಿಕೊಡಲಾಗಿತ್ತು. ಆದರೆ ಈ ಚಿತ್ರ ಪ್ರಶಸ್ತಿ ಪಡೆದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT