ನವದೆಹಲಿ: ಹಿಂದಿ ಚಿತ್ರರಂಗದಲ್ಲಿ (ಬಾಲಿವುಡ್) ಸಾಲು ಸಾಲು ಸಿನಿಮಾಗಳು ಸೋಲು ಅನುಭವಿಸುತ್ತಿರುವ ಕುರಿತು ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡಿ ಸುದ್ದಿಯಾಗುವ ಸ್ವರಾ, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

‘ಇಂಡಿಯಾ ಟುಡೇ’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ, ಹಿಂದಿ ಚಿತ್ರರಂಗದ ಸದ್ಯದ ಸ್ಥಿತಿಗತಿಯನ್ನು ರಾಹುಲ್ ಗಾಂಧಿಗೆ ಹೋಲಿಸಿದ್ದಾರೆ.

ಸಂದರ್ಶನದಲ್ಲಿ ಇತ್ತೀಚೆಗೆ ಹಿಂದಿ ಸಿನಿಮಾಗಳು ಸೋಲುತ್ತಿವೆಯಲ್ಲ, ಅದಕ್ಕೆ ಕಾರಣ ಏನಿರಬಹುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸ್ವರಾ, ಆರ್ಥಿಕ ಹಿಂಜರಿತವೇ ಬಾಕ್ಸ್ ಆಫೀಸ್ ತುಂಬದೇ ಇರಲು ಪ್ರಮುಖ ಕಾರಣವಾಗಿತ್ತು. ಈಗ ಮತ್ತೊಂದು ರೂಪ ಪಡೆದುಕೊಂಡಿದೆ. ಓಟಿಟಿಯು ಜನರನ್ನು ಚಿತ್ರಮಂದಿರಗಳಿಗೆ ಬಾರದಂತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದಿ ಚಿತ್ರರಂಗವನ್ನು ರಾಹುಲ್ ಗಾಂಧಿಗೆ ಹೋಲಿಸಿದ ಸ್ವರಾ, ‘ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಕರೆಯುತ್ತಿದ್ದಾರೆ. ನಾನು ಅವರನ್ನು ನೇರವಾಗಿ ಭೇಟಿ ಮಾಡಿದ್ದೇನೆ. ಅವರಷ್ಟು ಬುದ್ಧಿವಂತರು, ಸ್ಪಷ್ಟತೆ ಇರುವಂತವರು ಯಾರು ಇಲ್ಲ. ಆದರೂ, ಅವರನ್ನು ‘ಪಪ್ಪು’, ‘ಪಪ್ಪು’ ಎಂದು ಗೇಲಿ ಮಾಡಲಾಗುತ್ತಿದೆ. ಹಾಗೆಯೇ ಬಾಲಿವುಡ್ ಕೂಡ ಪಪ್ಪುಫಿಕೇಶನ್‌ನಲ್ಲಿ ನರಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

‘ಜಹಾನ್ ಚಾರ್ ಯಾರ್’ ಚಿತ್ರದಲ್ಲಿ ಸ್ವರಾ ಭಾಸ್ಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ನಟಿ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ.

ಓದಿ...

ಬಾಲಿವುಡ್: ಶಾರುಖ್, ಹೃತಿಕ್, ಅಕ್ಷಯ್ ಚಿತ್ರಗಳಿಗೆ ‘ಬಾಯ್ಕಾಟ್‘ ಬಿಸಿ ಯಾಕೆ?

ಬಿಜೆಪಿ ಪ್ರವಾದಿ ಮಹಮ್ಮದ್, ಮುಸ್ಲಿಮರನ್ನು ವಿರೋಧಿಸುತ್ತಿದೆ: ಓವೈಸಿ ಆರೋಪ

ಮುಂದಿನ ಚುನಾವಣೆಯಲ್ಲಿ ಟಿಆರ್ಎಸ್, ಕೆಸಿಆರ್ ನಿರ್ನಾಮ ಖಚಿತ: ಜೆ.ಪಿ ನಡ್ಡಾ

ಧರ್ಮದ ವಿರುದ್ಧ ಹೇಳಿಕೆ: ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪೊಲೀಸ್ ವಶಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.