ಬೆಂಗಳೂರು: ‘ಬಾಲಿವುಡ್ನಲ್ಲಿ ಸ್ವಜನಪಕ್ಷಪಾತವಿಲ್ಲ. ಬದಲಿಗೆ ಅಲ್ಲಿರುವುದು ಜನಾಂಗೀಯ ತಾರತಮ್ಯ‘ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಹೇಳಿದ್ದಾರೆ.

ಸುದ್ದಿ ಪೋರ್ಟಲ್ ಒಂದರ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಬಾಲಿವುಡ್ ಇಂದು ಸ್ವಜನಪಕ್ಷಪಾತಕ್ಕಿಂತಲೂ ಜನಾಂಗೀಯ ತಾರತಮ್ಯದಿಂದ ಹೆಚ್ಚು ನರಳುತ್ತಿದೆ‘ ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿ ಯಶಸ್ವಿ ಕಂಡ ಸುಧೀರ್ ಮಿಶ್ರಾ ನಿರ್ದೇಶನದ ‘ಸೀರಿಯಸ್ ಮೆನ್'ಸಿನಿಮಾದ ಕುರಿತಾದ ಸಂದರ್ಶನದಲ್ಲಿ ಸಿದ್ದಿಕಿಈ ಅಭಿಪ್ರಾಯ ಹೊರಹಾಕಿದ್ದಾರೆ.

‘ಆರಂಭದಲ್ಲಿ ನಾನು ಕೂಡಚಿತ್ರರಂಗದಲ್ಲಿ ಅನೇಕ ವರ್ಷ ಈ ಜನಾಂಗೀಯ ತಾರತಮ್ಯವನ್ನು ಅನುಭವಿಸಿದೆ. ಅದರಲ್ಲೂ ನಟಿಯರು ಇದರಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ'ಎಂದು ಹೇಳಿದ್ದಾರೆ. ‘ಬಾಲಿವುಡ್ಗೆ ಕೇವಲ ಉತ್ತಮ ಚಿತ್ರಗಳನ್ನು ನೀಡುವ ಗುರಿ ಇರಬೇಕೆ ಹೊರತು, ಕೀಳುಮಟ್ಟದ ಅಭಿರುಚಿ ಸಲ್ಲದು'ಎಂದಿದ್ದಾರೆ.

ಸೋನಿ ಫಿಕ್ಚರ್ಸ್ ಅಡಿ ನಿರ್ಮಾಣವಾಗುತ್ತಿರುವಸಿದ್ದಿಕಿಅವರ 'ಅದ್ಭೂತ್' ಎಂಬ ಸಿನಿಮಾಇತ್ತೀಚೆಗೆ ಸೆಟ್ಟೆರಿದೆ. ಅದಲ್ಲದೇ ಅವರ'ಹೀರೋಪಂತಿ 2', 'ಸಾರಾರಾ', 'ಬೋಲೆ ಚೂಡಿಯಾ' ಸಿನಿಮಾಗಳು ಬಿಡುಗಡೆಯಾಗಬೇಕಿದೆ.

ಇದನ್ನೂ ಓದಿ:ಕಪ್ ಗೆಲ್ಲದ ಆರ್ಸಿಬಿ; ಕೊಹ್ಲಿ ನಾಯಕತ್ವದ ಬಗ್ಗೆ ಟ್ವೀಟ್ ಮಾಡಿದ ನಟ ಸುದೀಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.