ಮುಂಬೈ: ಅಂಬೇಡ್ಕರ್ ಮೊಮ್ಮಗ ಹಾಗೂ ದಲಿತ ಹಕ್ಕು ಹೋರಾಟಗಾರ ಪ್ರಕಾಶ್ ಅಂಬೇಡ್ಕರ್ ಇದೇ ಮೊದಲ ಬಾರಿಗೆ ವೆಬ್ ಸಿರೀಸ್ನ ಪಾತ್ರವೊಂದನ್ನು ಮೆಚ್ಚಿಕೊಂಡಿದ್ದಾರೆ. ‘ಮೇಡ್ ಇನ್ ಹೆವನ್–2’ ವೆಬ್ ಸಿರೀಸ್ನಲ್ಲಿ ಬರುವ ದಲಿತ ಮಹಿಳೆ ‘ಪಲ್ಲವಿ’ ಪಾತ್ರ ಮತ್ತು ದಲಿತ–ಬೌದ್ದ ವಿವಾಹ ಇಷ್ಟವಾಯಿತು ಎಂದು ಹೇಳಿಕೊಂಡಿದ್ದಾರೆ.

ನೀರಜ್ ಘಯ್ವಾನ್ ನಿರ್ದೇಶನದ ‘ಮೇಡ್ ಇನ್ ಹೆವನ್–2’ ವೆಬ್ ಸಿರೀಸ್ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿದೆ. ರಾಧಿಕಾ ಆಪ್ಟೆ, ಶೋಬಿತಾ ಧೂಲಿಪಾಲ, ಅರ್ಜುನ್ ಮಾಥುರ್, ಕಲ್ಕಿ ಕೊಚ್ಲಿನ್ ವೆಬ್ ಸಿರೀಸ್ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ನಟಿ ರಾಧಿಕಾ ಆಪ್ಟೆ ಅವರು ಈ ಸಂಚಿಕೆಯಲ್ಲಿ ಪಲ್ಲವಿ ಮೆಂಕೆ ಎಂಬ ದಲಿತ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಕೀಲರಾಗಿರುವ ಪಲ್ಲವಿ ಜಾತಿ ಅಸಮಾನತೆ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಾಳೆ. ಸಮಾನತೆ ಸಮಾಜದ ಬಗ್ಗೆ ಕನಸು ಕಂಡಿರುತ್ತಾಳೆ. ಅಷ್ಟೇ ಅಲ್ಲದೇ ಸಂಚಿಕೆಯ ಕೊನೆ ಭಾಗದಲ್ಲಿ ದಲಿತ–ಬೌದ್ದ ಸಂಪ್ರದಾಯದಂತೆ ವಿವಾಹವಾಗಬೇಕೆಂದು ತನ್ನ ಸಂಗಾತಿಗೆ ಹೇಳುತ್ತಾಳೆ.

ಚಿತ್ರದ ಕೆಲವೊಂದು ದೃಶ್ಯವನ್ನು ಟ್ವಿಟರ್ನಲ್ಲಿ(ಎಕ್ಸ್) ಪೋಸ್ಟ್ ಮಾಡಿರುವ ಪ್ರಕಾಶ್ ಅಂಬೇಡ್ಕರ್, ಪಲ್ಲವಿ ಪಾತ್ರವನ್ನು ಮೆಚ್ಚಿಕೊಂಡಿರುವುದಾಗಿ ತಿಳಿಸಿದ್ದಾರೆ.

‘ಈ ಸಂಚಿಕೆಯನ್ನು ನೋಡಿದ ವಂಚಿತ ವರ್ಗದವರು ಮತ್ತು ಬಹುಜನರು ಪಲ್ಲವಿ ಪಾತ್ರವನ್ನು ಸರಿಯಾಗಿ ಗಮನಿಸಿ. ಪಲ್ಲವಿ ಹೇಳುವಂತೆ ನಿಮ್ಮ ಗುರುತನ್ನು ಗಟ್ಟಿಯಾಗಿ ಪ್ರತಿಪಾದಿಸಿದಾಗ ಮಾತ್ರ ನೀವು ರಾಜಕೀಯ ಪ್ರಾಮುಖ್ಯತೆ ಗಳಿಸುತ್ತೀರಿ‘ ಎಂದಿದ್ದಾರೆ.

ಪ್ರಕಾಶ್ ಅಂಬೇಡ್ಕರ್ ಅವರ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ನೀರಜ್ ಘಯ್ವಾನ್ ಧನ್ಯವಾದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.