ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ ಎಂದು ಛತ್ತೀಸಗಢ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ಇದಕ್ಕೆ ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಗಾಯಕಿ ಸೋನಾ ಮಹಾಪಾತ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎನ್ಡಿಟಿವಿಯ ವಿಡಿಯೊವನ್ನು ಟ್ವೀಟ್ ಮಾಡಿರುವ ತಾಪ್ಸಿ ಪನ್ನು, 'ಕೇಳುವುದಕ್ಕೆ ಇದೊಂದು ಬಾಕಿ ಇತ್ತು' ಎಂದು ಬರೆದುಕೊಂಡಿದ್ದಾರೆ.

'ಈ ತೀರ್ಪಿನ ಬಗ್ಗೆ ಓದುವಾಗ ನಾನು ಅನುಭವಿಸಿದ ಸಂಕಟವನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ' ಎಂದು ಸೋನಾ ಮಹಾಪಾತ್ರ ಟ್ವೀಟ್ ಮಾಡಿದ್ದಾರೆ.

ಕಾನೂನಾತ್ಮಕವಾಗಿ ವಿವಾಹವಾದ ಬಳಿಕ ಪತ್ನಿಯ ಮೇಲೆ ಪತಿ ನಡೆಸುವ ಬಲತ್ಕಾರ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ ಎಂದು ಹೈಕೋರ್ಟ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.