‘ಟಗರುಪಲ್ಯ’ ಚಿತ್ರದಲ್ಲಿನ ನಟನೆಗಾಗಿ ತಾರಾ ಅನುರಾಧಾ ಅವರು ಈಸಲದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರ ಪರವಾಗಿ ತಾರಾ ಪುತ್ರ ಕೃಷ್ಣ ನಟ ದೊಡ್ಡಣ್ಣ ಅವರಿಂದ ಪ್ರಶಸ್ತಿ ಪಡೆದರು.

ಬಾಲನಟಿಯಾಗಿ ಸಿನಿಪಯಣ ಆರಂಭಿಸಿದ ತಾರಾ ತಮಿಳು ಚಿತ್ರರಂಗಕ್ಕೆ ಮೊದಲು ಹೆಜ್ಜೆ ಇಟ್ಟರು. ‘ತುಳಸೀದಳ’ ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಯ ಪಯಣ ಆರಂಭಿಸಿದರು. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅನುರಾಧಾ ಆಗಿದ್ದ ತಾರಾ ಪಿಯುಸಿಗೆ ಬರುವಷ್ಟರಲ್ಲೇ ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದರು. ಗಿರೀಶ ಕಾಸರವಳ್ಳಿ ನಿರ್ದೇಶನದ ‘ಹಸೀನಾ’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ‘ಕಾನೂರು ಹೆಗ್ಗಡತಿ’, ‘ಕರಿಮಲೆಯ ಕಗ್ಗತ್ತಲು’, ‘ಮುಂಜಾನೆಯ ಮಂಜು’, ‘ಸೈನೈಡ್’, ‘ಹೆಬ್ಬೆಟ್ ರಾಮಕ್ಕ’ ತಾರಾ ನಟಿಸಿದ ಪ್ರಮುಖ ಚಿತ್ರಗಳು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಚಲನಚಿತ್ರ ಕ್ಷೇತ್ರದ ಜೊತೆಗೆ ರಾಜಕೀಯದಲ್ಲೂ ಇವರು ಸಕ್ರಿಯ. ‘ಬಡವ ರಾಸ್ಕಲ್’, ‘ಟಗರುಪಲ್ಯ’ ಸಿನಿಮಾದಲ್ಲಿಅವರ ನಟನೆ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ‘ಕೋಟಿ’ ಸಿನಿಮಾ ಬಿಡುಗಡೆಗೊಂಡಿದೆ.

ನಾಮನಿರ್ದೇಶನಗೊಂಡಿದ್ದವರು...

ವೆನ್ಯಾ ರೈ ಚಿತ್ರ: ಭಾವಪೂರ್ಣ

ಗುಂಜಾಲಮ್ಮ ಚಿತ್ರ: ಪಿಂಕಿ ಎಲ್ಲಿ?

ಉಮಾಶ್ರೀ ಚಿತ್ರ: ಕಾಸಿನಸರ

ಪವಿತ್ರಾ ಲೋಕೇಶ್ ಚಿತ್ರ: ಸಪ್ತ ಸಾಗರದಾಚೆ ಎಲ್ಲೋ
.ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ-2 | ಶಿಶಿರ್ ಉತ್ತಮ ನಟ, ರುಕ್ಮಿಣಿ ಉತ್ತಮ ನಟಿ .ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ–2: ತಾರೆಯರ ಸಮಾಗಮ, ಮೇಳೈಸಿದ ನೃತ್ಯ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.