ಗಹನ

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಡಿ ಆರ್. ಶ್ರೀನಿವಾಸ್ (ಸ್ಟಿಲ್ ಸೀನು) ನಿರ್ಮಾಣದ ‘ಗಹನ’ (ಸೈಕಲಾಜಿಕಲ್ ಥ್ರಿಲ್ಲರ್) ಚಿತ್ರ ಬಿಡುಗಡೆಯಾಗುತ್ತಿದೆ. ಪ್ರೀತ್ ಹಾಸನ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಸಹನಿರ್ದೇಶನ ಚಂದ್ರ ಅಂತ ಮತ್ತು ಶ್ರೀನಿವಾಸ್ ಸಿನಿ ಅವರದ್ದು. ಸಾಯಿ ಶ್ರೀನಿವಾಸ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜನೆ ರಘು ಮತ್ತು ಧನವಂತ್ರಿ ಅವರದು. ರಾಜೀವ ಜೆ. ಅವರ ಸಂಕಲನವಿದೆ. ವಿಜಯ್ ವಿಶ್ವಮಣಿ ಸಾಹಿತ್ಯ ರಚಿಸಿದ್ದಾರೆ. ನೃತ್ಯ ನಿರ್ದೇಶನ ಸಾಯಿ ಲಕ್ಷ್ಮಣ್ ಅವರದು. ಸರಸ್ವತಿ ಶ್ರೀನಿವಾಸ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜನಿ, ಶಿವು, ಇಂಚರ ಭೀಮಯ್ಯ, ಸ್ವಾತಿ ಶಿವಮೊಗ್ಗ, ಸುನಿಲ್ ಗೌಡ, ಸುಭಾಷ್ಚಂದ್ರ, ಸ್ವಾತಿ ಕೊಡಗು ಇದ್ದಾರೆ.

ಕೆಮಿಸ್ಟ್ರಿ ಆಪ್ ಕರಿಯಪ್ಪ

ಎಂ. ಸಿರಿ ಪ್ರೊಡಕ್ಷನ್ ಲಾಂಛನದಡಿ ಡಾ.ಡಿ.ಎಸ್. ಮಂಜುನಾಥ್ ನಿರ್ಮಿಸಿರುವ ‘ಕೆಮಿಸ್ಟ್ರಿ ಆಪ್ ಕರಿಯಪ್ಪ’ ಚಿತ್ರ ಬಿಡುಗಡೆಯಾಗುತ್ತಿದೆ.

ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ಶಿವ ಸೀನ ಅವರ ಛಾಯಾಗ್ರಹಣವಿದೆ. ಅರವ್ ರಿಶಿಕ್ ಸಂಗೀತ ಸಂಯೋಜಿಸಿದ್ದಾರೆ. ಸಂಜಯ್ಕುಮಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ವೆಂಕಿ ಯುಡಿವಿ ಅವರ ಸಂಕಲನವಿದೆ. ಲಕ್ಷ್ಮಿವಿನಯ್ ನೃತ್ಯ ನಿರ್ದೇಶನವಿದೆ. ತಬಲ ನಾಣಿ, ಚಂದನ್ ಆಚಾರ್ಯ, ಸಂಜನಾ ಆನಂದ್, ಸುಚೇಂದ್ರಪ್ರಸಾದ್, ಅಪೂರ್ವಾ, ಡಾ.ಡಿ.ಎಸ್. ಮಂಜುನಾಥ್, ಮೈಕೊ ನಾಗರಾಜ್, ರಾಕ್ಲೈನ್ ಸುಧಾಕರ್, ಹನುಮಂತೇಗೌಡ, ಪ್ರಣಯಮೂರ್ತಿ, ಶ್ರೀನಿವಾಸಮೂರ್ತಿ ತಾರಾಗಣದಲ್ಲಿದ್ದಾರೆ.

ಬೆಲ್ ಬಾಟಂ

ಗೋಲ್ಡನ್ ಹಾರ್ಸ್ ಸಿನಿಮಾ ಲಾಂಛನದಡಿ ಸಂತೋಷ್ಕುಮಾರ್ ಕೆ.ಸಿ. ನಿರ್ಮಿಸಿರುವ ‘ಬೆಲ್ ಬಾಟಂ’ ಚಿತ್ರ ಬಿಡುಗಡೆಯಾಗುತ್ತಿದೆ.

ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಭೂಷಣ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಟಿ.ಕೆ. ದಯಾನಂದ ಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್, ಅಚ್ಯುತಕುಮಾರ್, ಶಿವಮಣಿ, ಸುಜಯ್ ಶಾಸ್ತ್ರಿ, ದಿನೇಶ್ ಮಂಗಳೂರು, ಪಿ.ಡಿ. ಸತೀಶ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.