ರಜಿನಿಕಾಂತ್ ಅಭಿನಯದ ‘ದರ್ಬಾರ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ನಷ್ಟ ಅನುಭವಿಸಿದ್ದು, ವಿತರಕರು ರಜನಿಕಾಂತ್ ಅವರೇ ಪರಿಹಾರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಎ.ಆರ್. ಮುರುಗದಾಸ್ ನಿರ್ದೇಶನ ಈ ಸಿನಿಮಾ ಸುಮಾರು 200 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು, ಈ ವರೆಗೆ ಕೇವಲ 250 ಕೋಟಿ ಮಾತ್ರ ಗಳಿಸಿದೆ. ಇದರಲ್ಲಿ ರಜನಿಕಾಂತ್ ಸಂಭಾವನೆ 108 ಕೋಟಿ. ಅಲ್ಲಿಗೆ ಸಿನಿಮಾ ಸೋತಿದೆ ಎನ್ನಲಾಗಿದೆ.

ಸಿನಿಮಾವನ್ನು ಬಿಡುಗಡೆ ಮಾಡಿದ್ದ ಹಾಗೂ ಖರೀದಿ ಮಾಡಿದ್ದ ವಿತರಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು, ಹಾಕಿದ್ದ ಬಂಡವಾಳ ಕೂಡ ಬಂದಿಲ್ಲ, ಆಗಿರುವ ನಷ್ಟವನ್ನು ರಜನಿಕಾಂತ್ ಅವರು ಹಿಂತಿರುಗಿಸಬೇಕು ಎಂದು ತಮಿಳು ಭಾಷೆಯ ಸಿನಿಮಾ ವಿತರಿಸಿದ್ದ ಕೆಲವು ವಿತರಕರು ಬೇಡಿಕೆಯಿಟ್ಟಿದ್ದಾರೆ.

ಈ ಹಿಂದೆ ತಮ್ಮ ಸಿನಿಮಾ ಸೋತಾಗ ತಲೈವ ವಿತರಕರ ಕೈಬಿಟ್ಟಿಲ್ಲ. ಬಾಬಾ, ಲಿಂಗಾ ಸಿನಿಮಾ ಸೋತಾಗ ಆ ಸಿನಿಮಾ ವಿತರಕರಿಗೆ ಪರಿಹಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ದರ್ಬಾರ್’ ಸಿನಿಮಾ ವಿತರಕರು ರಜನಿ ಭೇಟಿಗೆ ನಿರ್ಧರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.