ನಟ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟನೆಯ ‘ದಬಾಂಗ್ 3’ ಚಿತ್ರದ ಕನ್ನಡದ ಟ್ರೇಲರ್ ಬಿಡುಗಡೆಗೊಂಡಿದೆ.

ಚಿತ್ರದ ಮೋಷನ್ ಪೋಸ್ಟರ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಸಲ್ಮಾನ್ ಖಾನ್ ‘ಟೈಮೂ ನಂದೂ... ತಾರೀಕೂ ನಂದೂ...’ ಎಂದು ಕನ್ನಡದಲ್ಲಿ ಹೊಡೆದ ಡೈಲಾಗ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಟ್ರೇಲರ್‌ನಲ್ಲಿನ ಅವರ ಅಬ್ಬರ ಕಂಡು ಬೆರಗಾಗಿದ್ದಾರೆ.

‘ಒಬ್ಬ ಪೊಲೀಸ್ ಆದ್ರೆ; ಇನ್ನೊಬ್ಬ ಗೂಂಡ. ಇಬ್ಬರೂ ಒಬ್ಬನೇ ಆದ್ರೆ ಗೂಂಡಾ ಪೊಲೀಸ್...’, ‘ಹುಟ್ಟುತಾನೆ ಯಾರೂ ರೆಬೆಲ್ ಆಗಲ್ಲ; ಅದಕ್ಕೊಂದು ಕಾರಣ ಇರುತ್ತದೆ’ ಎಂದು ಕನ್ನಡದಲ್ಲಿ ಸಲ್ಲು ಅಬ್ಬರಿಸಿದ್ದಾರೆ.

ಪ್ರಭುದೇವ ನಿರ್ದೇಶನದ ಈ ಚಿತ್ರ ಡಿಸೆಂಬರ್ 20ರಂದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳದಲ್ಲಿ ತೆರೆ ಕಾಣಲಿದೆ. ಹಾಗಾಗಿ, ಸಲ್ಲು ಮತ್ತು ಕಿಚ್ಚನ ಅಭಿಮಾನಿಗಳಲ್ಲಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಟ್ರೇಲರ್ ಬಿಡುಗಡೆ ಸಮಾರಂಭ ವೇಳೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್, ‘ಒಳ್ಳೆಯ ಕಥೆಗಳು ಸಿಕ್ಕಿದರೆ ಕನ್ನಡದಲ್ಲಿಯೂ ನಟಿಸಲು ಸಿದ್ಧ. ಈಗಾಗಲೇ, ಸುದೀಪ್ ಜೊತೆಗೆ ನಟಿಸಿದ್ದೇನೆ. ಕನ್ನಡದ ನಿರ್ದೇಶಕರೊಟ್ಟಿಗೂ ನಟಿಸುವ ಆಸೆಯೂ ಇದೆ. ಶೀಘ್ರವೇ, ಬೆಂಗಳೂರಿಗೆ ಬಂದು ಅಭಿಮಾನಿಗಳನ್ನು ಭೇಟಿಯಾಗಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದರು.

ಇದನ್ನೂ ಓದಿ...‘ದಬಾಂಗ್ 3’ಯಲ್ಲಿ ಸುದೀಪ್ ವಿಲನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.