ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರಗಳು ಒಂದರ ಹಿಂದೆ ಒಂದು ಯಶಸ್ವಿ ಆಗುತ್ತಿವೆ.ಕನ್ನಡಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಕೆಲವೇ ಕೆಲವು ನಟರುಗಳ ಪೈಕಿ ದರ್ಶನ್ ಕೂಡ ಮುಂಚೂಣಿಯಲ್ಲಿರುವವರು. ದರ್ಶನ್ ತಾವಷ್ಟೇ ಬೆಳೆಯುವುದನ್ನು ನೋಡುತ್ತಿಲ್ಲ. ಚಿತ್ರರಂಗಕ್ಕೆ ಹೊಸದಾಗಿ ಕಾಲಿಡುವ ಉದಯೋನ್ಮುಖ ನಟರನ್ನೂ ಬೆಂಬಲಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಗಿದ್ದಾರೆ. ಅವರ ಈ ಒಳ್ಳೆಯ ಗುಣ ಅವರ ಅಭಿಮಾನಿಗಳಿಗೂ ಖುಷಿ ನೀಡುತ್ತಿದೆ. ಜತೆಗೆ ಹೊಸಬರಿಗೂ ಉತ್ತೇಜನ ನೀಡುತ್ತಿದೆ.

ಚಿತ್ರದ ಮುಹೂರ್ತ, ಆಡಿಯೊ ಬಿಡುಗಡೆ, ಪೋಸ್ಟರ್, ಟೀಸರ್, ಟ್ರೇಲರ್ ಬಿಡುಗಡೆ ಹೀಗೆ ಹೊಸಬರ ಚಿತ್ರದ ಯಾವುದೇ ಕಾರ್ಯಕ್ರಮವಿದ್ದರೂ ದರ್ಶನ್ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ.

ನವನಟ ಹರಿ ಅಭಿನಯದ ‘ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್’ಪಕ್ಕಾ ಕಾಮಿಡಿ ಚಿತ್ರದ ಟೀಸರ್ ಅನ್ನು ಇಂದು ಸಂಜೆ 6 ಗಂಟೆಗೆ ತಮ್ಮ ಮನೆಯಿಂದಲೇ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬಾಹುಬಲಿ ನಿರ್ದೇಶನ ಮಾಡಿದ್ದಾರೆ.ಎಂ.ಡಿ.ಶ್ರೀಧರ್, ಮೋಹನ್ ಹಾಗೂ ಛಾಯಾಗ್ರಾಹಕ ಕೃಷ್ಣಕುಮಾರ್ ನಿರ್ಮಾಣ ಮಾಡಿದ್ದಾರೆ.

ಹಾಗೆಯೇ ನಿರ್ಮಾಪಕ ನಾಗೇಶ್ ಕೋಗಿಲು ನಿರ್ಮಾಣ ಮತ್ತು ವಿ.ರಘುಶಾಸ್ತ್ರಿ ನಿರ್ದೇಶನದ‘ಟಕ್ಕರ್’ ಸಿನಿಮಾದ ಆಡಿಯೊವನ್ನು ಸೆಪ್ಟೆಂಬರ್ 7ರಂದು ದರ್ಶನ್ ಬಿಡುಗಡೆ ಮಾಡಿ, ಚಿತ್ರ ತಂಡವನ್ನು ಹುರಿದುಂಬಿಸಲಿದ್ದಾರೆ.

ಮತ್ತೊಂದು ಸಂಗತಿ ಎಂದರೆ, ದರ್ಶನ್ ಅಳಿಯ ಮನೋಜ್ ಕುಮಾರ್ ಅಭಿನಯದ ಚಿತ್ರವಿದು. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳು ಇವೆ. ಎರಡು ಹಾಡುಗಳನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

ವಿಜಯಪ್ರಕಾಶ್ ಮತ್ತು ಅನುರಾಧಾ ಭಟ್, ಶಶಾಂಕ್ ಶೇಷಗಿರಿ ಹಾಗೂ ಸಂಜಿತ್ ಹೆಗ್ಡೆ ಹಾಡುಗಳಿಗೆ ದನಿಯಾಗಿದ್ದಾರೆ.ಕದ್ರಿ ಮಣಿಕಾಂತ್ ಸಂಗೀತ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರಕಥೆಯನ್ನು ರಘು ಶಾಸ್ತ್ರಿ ಅವರೇ ಬರೆದಿದ್ದಾರೆ. ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲ ತಾರಾಗಣದಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.