ಧರ್ಮಣ್ಣ ಕಡೂರು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ರಾಜಯೋಗ’ದ ‘ನಗಬ್ಯಾಡ್ವೇ ನನ್ನ ಕಂಡು, ನಾನೂ ಬಿಎ ಮಾಡಿದ ಗಂಡು’ ಎಂಬ ಹಾಡನ್ನು ನಟ ಅಭಿಷೇಕ್ ಅಂಬರೀಶ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

‘ಚಿತ್ರದ ಮೊದಲ ಹಾಡನ್ನು ನೋಡಿದೆ. ಇದರಲ್ಲಿ ನಾಯಕ ಧರ್ಮಣ್ಣ, ನಾಯಕಿ ನಿರೀಕ್ಷಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶಕ ಅಕ್ಷಯ್ ರಿಶಭ್ ಕೆಲಸ ಎದ್ದು ಕಾಣುತ್ತದೆ. ನವಜೊಡಿಗಳಿಗೆ ತುಂಬ ಇಷ್ಟವಾಗುವ ಹಾಡು. ಎಲ್ಲರೂ ಸಿನಿಮಾವನ್ನು ನೋಡಿ ತಂಡಕ್ಕೆ ಬೆಂಬಲಿಸಿ’ ಎಂದರು ಅಭಿಷೇಕ್.

ಲಿಂಗರಾಜ ಉಚ್ಚಂಗಿದುರ್ಗ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶ್ರೀರಾಮರತ್ನ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಅಕ್ಷಯ್ ರಿಶಭ್ ಅವರ ಸಂಗೀತ, ವಿಷ್ಣುಪ್ರಸಾದ್ ಕ್ಯಾಮೆರಾ, ಬಿ.ಎಸ್.ಕೆಂಪರಾಜು ಸಂಕಲನ ಈ ಚಿತ್ರಕ್ಕಿದೆ. ನಾಗೇಂದ್ರ ಶಾ, ಕೃಷ್ಣಮೂರ್ತಿ ಕವತ್ತಾರು ಮೊದಲಾದವರು ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.