ಬೆಂಗಳೂರು: ‘ಪೊಗರು’ ಚಿತ್ರದ ವಿವಾದಿತ ದೃಶ್ಯ ಸಂಬಂಧಿಸಿ ನಿರ್ದೇಶಕರೇ ಕ್ಷಮೆ ಕೇಳಿದ್ದರೂ ಚಿತ್ರದ ಪುಟ್ಟ ತುಣುಕು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ದ್ರುವ ಸರ್ಜಾ ಅಭಿಮಾನಿಗಳು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು.

ಸಿನಿಮಾ ಸಂಬಂಧಿಸಿದ ವಿವಾದಗಳೆಲ್ಲಾ ಮುಗಿದಿವೆ. ಆದರೆ ಯೂಟ್ಯೂಬರ್ ಚಿರುಭಟ್ ಎಂಬುವವರು ಚಿತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಮಂಡಳಿಯ ಕಾರ್ಯದರ್ಶಿ ಎನ್.ಎಂ. ಸುರೇಶ್ ಅವರು ಚಿರು ಭಟ್ ಅವರಿಗೆ ಕರೆ ಮಾಡಿದ್ದಾರೆ. ಮಾತುಕತೆ ಮುಂದುವರಿದಿದೆ.

ಚಿರುಭಟ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ದ್ರುವ ಸರ್ಜಾ ಅಭಿಮಾನಿ ಶೇಖರ್ ಮತ್ತು ಚಿರು ಭಟ್ ಅವರ ವಾಗ್ವಾದದ ಆಡಿಯೋ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.