ದಿಗಂತ್– ಐಂದ್ರಿತಾ ರೇ ದಂಪತಿ ಅಭಿನಯದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು ತೆರೆಗೆ ಬರಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಚಿತ್ರದ ಡಬ್ಬಿಂಗ್ ನಡೆದಿದೆ.

ಉಪ್ಪಿ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ವಿನಾಯಕ ಕೋಡ್ಸರ ಅವರ ಕಥೆ, ಚಿತ್ರಕಥೆ ನಿರ್ದೇಶನವಿದೆ. ಪ್ರಜ್ವಲ್ ಪೈ ಅವರು ಸಂಗೀತ ನೀಡಿದ್ದಾರೆ. ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಸಾಗರ, ಸಿಗಂಧೂರು, ಬೆಂಗಳೂರಿನ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆದಿದೆ. ನಂದಕಿಶೋರ್ ಎನ್. ರಾವ್ ಛಾಯಾಗ್ರಹಣ ಹಾಗೂ ರಾಹುಲ್ ವಸಿಷ್ಠ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ವಿಶ್ವಜಿತ್ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಂ ರಚಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ವೇಣು ಹಸ್ರಾಳಿ ಬರೆದಿದ್ದಾರೆ.
ಹಿರಿಯ ನಟಿ ಉಮಾಶ್ರೀ, ರಂಜನಿ ರಾಫವನ್, ಪಿ.ಡಿ.ಸತೀಶ್ ಚಂದ್ರ, ಪ್ರಕಾಶ್ ತೂಮಿನಾಡ್ ಹಾಗೂ ನೀನಾಸಂನ ಹಲವು ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.