ಖ್ಯಾತಸಾಹಿತಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಮೊದಲ ಬಾರಿಗೆ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ಅಮೃತವಾಹಿನಿ’ ಚಿತ್ರ ಜನವರಿ 8 ರಂದು ತೆರೆಗೆ ಬರಲಿದೆ. ಯು.ವಿ. ಪ್ರೊಡಕ್ಷನ್ ಲಾಂಛನದಲ್ಲಿ ಅನಂತಪದ್ಮನಾಭ ಅರ್ಪಿಸುವ ಈ ಚಿತ್ರವನ್ನು ಕೆ. ಸಂಪತ್ಕುಮಾರ್ ಹಾಗೂ ಅಕ್ಷಯ್ರಾವ್ ನಿರ್ಮಿಸಿದ್ದಾರೆ.

ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಾಘವೇಂದ್ರ ಬಿ. ಪಾಟೀಲ್ ಕಥೆ ಬರೆದಿದ್ದು, ಕೆ. ನರೇಂದ್ರ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನರೇಂದ್ರ ಬಾಬು ಈ ಹಿಂದೆ ಪಲ್ಲಕ್ಕಿ, ಯುವ, ಓ ಗುಲಾಬಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವೆಂಕಟೇಶ ಮೂರ್ತಿ ಅವರೇ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ. ಶಿವಾನಂದ್ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಕೆ.ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

ವೈದ್ಯ ಶಿವಮೊಗ್ಗ, ಸಂತೋಷ್ ಕರ್ಕಿ, ಮಧು ಸಾಗರ್, ಮಂಜೇಶ್ ಕಲಾಲ್, ಭಾಸ್ಕರ್, ಜಗದೀಶ್, ಮಂಜುನಾಥ್ ಬೂದಿಹಾಳಮಟ್, ಮಾ. ಆರ್ಯನ್ ಸೂರ್ಯ, ಡಾ. ವತ್ಸಲಾ ಮೋಹನ್, ಸುಪ್ರಿಯಾ. ಎಸ್. ರಾವ್, ಗೀತಾ ಸೂರ್ಯವಂಶಿ, ಆರ್.ಟಿ. ರಮಾ, ಬೇಬಿ ಋತ್ವಿ, ಡಾ. ಶೈಲಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅಮೃತವಾಹಿನಿ ಚಿತ್ರವು ಈಗಾಗಲೇ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ(CClT) ಪ್ರದರ್ಶನವಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.