ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮುಖ್ಯ ಭೂಮಿಕೆಯಲ್ಲಿರುವ‘ಡ್ರೀಮ್ ಗರ್ಲ್’ ಬಿಡುಗಡೆಗೂ ಮುನ್ನವೇ ಅಪಸ್ವರ ಕೇಳಿ ಬಂದಿದೆ. ಈ ಚಿತ್ರ 2017ರಲ್ಲಿ ಬಿಡುಗಡೆಯಾದ ತಮ್ಮ ಚಿತ್ರ‘ಕಾಲ್ ಫಾರ್ ರನ್’ ಚಿತ್ರದ ಯಥಾವತ್ ನಕಲುಎಂದು ಆಚಿತ್ರದ ನಿರ್ದೇಶಕಜನಕ್ ತೊಪರಾನಿ ಆರೋಪಿಸಿದ್ದಾರೆ.

ಅನಿವಾರ್ಯ ಕಾರಣಗಳಿಂದ ಹೆಣ್ಣಿನ ವೇಷ ತೊಡುವ ನಾಯಕ ಪಡುವ ಬವಣೆಯನ್ನು ನವಿರಾದ ಹಾಸ್ಯದ ಮೂಲಕ ಕಟ್ಟಿ ಕೊಡುವ ಕಥೆಯನ್ನು ನಟ ಜೀತೇಂದ್ರ ಪುತ್ರಿ ಏಕ್ತಾ ಕಪೂರ್ ಒಡೆತನದ ಬಾಲಾಜಿ ಚಿತ್ರನಿರ್ಮಾಣ ಸಂಸ್ಥೆಯ ಜತೆ ಚರ್ಚಿಸಿದ್ದೆ. ಚಿತ್ರ ಮಾಡಲು ಸಂಸ್ಥೆ ಆಸಕ್ತಿ ತೋರದ ಕಾರಣ ಬೇರೆಯವರ ಜತೆ ಸೇರಿ ‘ಕಾಲ್ ಫಾರ್ ರನ್’ ಚಿತ್ರ ನಿರ್ಮಿಸಿದೆ.

ತನ್ನ ಚಿತ್ರಕತೆಯನ್ನು ಕೇಳಿದ್ದಬಾಲಾಜಿ ಚಿತ್ರ ಸಂಸ್ಥೆಯ ಅಧಿಕಾರಿಗಳು ಅದರಲ್ಲಿ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ‘ಡ್ರೀಮ್ ಗರ್ಲ್’ ಕತೆ ಹೆಣೆದಿದ್ದಾರೆ ಎಂದು ತೊಪರಾನಿ ದೂರಿದ್ದಾರೆ. ಕೋರ್ಟ್ ಮೆಟ್ಟಿಲೇರುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.ರಾಜ್ ಶಾಂಡಿಲ್ಯಾ ನಿರ್ದೇಶನದ ಮೊದಲ ಚಿತ್ರವನ್ನುಬಾಲಾಜಿ ಸಂಸ್ಥೆಯ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.