ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿ ಸಂಜನಾ ಗಲ್ರಾನಿ (30) ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನಟಿ ಜೊತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಬೆಂಗಳೂರಿನ ಶಾಸಕರೊಬ್ಬರ ಮೇಲೂ ಕಣ್ಣಿಟ್ಟಿದ್ದಾರೆ.

ಇಂದಿರಾನಗರದಲ್ಲಿರುವ ಸಂಜನಾ ಅವರ ಫ್ಲ್ಯಾಟ್ ಮೇಲೆ ಮಂಗಳವಾರ ಬೆಳಿಗ್ಗೆ ಪೊಲೀಸರು ದಿಢೀರ್ ದಾಳಿ ಮಾಡಿದರು. ಹೂವಿನ ಕುಂಡ, ಮನೆಯ ಕೊಠಡಿ ಹಾಗೂ ಬಿಎಂಡಬ್ಲ್ಯು ಕಾರಿನಲ್ಲಿ ಶೋಧ ನಡೆಸಿದರು. ಮೊಬೈಲ್ ಫೋನ್‌ಗಳು ಸೇರಿ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿದರು.

ಸಂಜನಾ ಹಾಗೂ ತಾಯಿ ರೇಷ್ಮಾ ಮನೆಯಲ್ಲಿದ್ದರು. ಶೋಧದ ನಂತರ ಸಂಜನಾರನ್ನು ವಶಕ್ಕೆ ಪಡೆದ ಪೊಲೀಸರು, ತಮ್ಮ ವಾಹನದಲ್ಲೇ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಕರೆದೊಯ್ದರು.

ಸೋಮವಾರ ಬಂಧಿತರಾಗಿದ್ದ ಕೇರಳದ ರೂಪದರ್ಶಿ ನಿಯಾಜ್ ಜೊತೆ ಸಂಜನಾ ಒಡನಾಟವಿಟ್ಟುಕೊಂಡಿದ್ದರು. ಜೊತೆಗೆ, ಕಾರ್ಯಕ್ರಮ ಸಂಘಟಕಿ ಮಂಗಳೂರಿನ ಪೃಥ್ವಿ ಶೆಟ್ಟಿ ಎಂಬಾಕೆಯೊಂದಿಗೆ ಪಾಲುದಾರಿಕೆಯಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದರೆಂಬ ಮಾಹಿತಿಯೂ ಇದೆ. ನಿಯಾಜ್ ಹಾಗೂ ಪೃಥ್ವಿ ನೀಡಿದ್ದ ಹೇಳಿಕೆ ಆಧರಿಸಿ ಸಂಜನಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು.

ಕೆಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದ್ದಂತೆ ಸಂಜನಾ ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. 8ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು
ಪಡಿಸಿ ವಿಚಾರಣೆಗಾಗಿ 5 ದಿನ ಕಸ್ಟಡಿಗೆ ಪಡೆದಿದ್ದಾರೆ.

ಅದರ ಬೆನ್ನಲ್ಲೇ ನಟಿ ರಾಗಿಣಿ ದ್ವಿವೇದಿ ಆಪ್ತರಾದ ಪ್ರಶಾಂತ್ ರಂಕಾ ಹಾಗೂ ಅಶ್ವಿನ್ ಅಲಿಯಾಸ್ ಮೂಗಿ ಎಂಬುವವರನ್ನೂ ಬಂಧಿಸಲಾಗಿದೆ. ಅವರಿಬ್ಬರನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ.

‘ಬಂಧಿತರು ನೀಡಿದ್ದ ಹೇಳಿಕೆ ಆಧರಿಸಿ ನ್ಯಾಯಾಲಯದ ವಾರಂಟ್ ಪಡೆದು ಸಂಜನಾ ಮನೆ ಮೇಲೆ ದಾಳಿ ಮಾಡಲಾಯಿತು. ತನಿಖೆ ದೃಷ್ಟಿಯಿಂದ ಹೆಚ್ಚು ಮಾಹಿತಿ ಬಹಿರಂಗ
ಪಡಿಸಲಾಗದು’ ಎಂದು ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ಶಾಸಕನ ಆಪ್ತನಿಗಾಗಿ ಹುಡುಕಾಟ

ಬೆಂಗಳೂರಿನ ಶಾಸಕರೊಬ್ಬರ ಆಪ್ತನೆಂದು ಹೇಳಲಾಗಿರುವ ಶೇಖ್ ಫೈಜಲ್ ಎಂಬಾತ, ನಟಿ ಸಂಜನಾ ಜೊತೆ ಒಡನಾಟವಿಟ್ಟುಕೊಂಡಿದ್ದ. ನಿಯಾಜ್ ಜೊತೆಯೂ ಆತ್ಮೀಯವಾಗಿದ್ದ. ಸದ್ಯ ಫೈಜಲ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ.

‘ಹಲವು ಪಾರ್ಟಿಗಳಲ್ಲಿ ನಿಯಾಜ್, ಸಂಜನಾ, ಫೈಜಲ್ ಪಾಲ್ಗೊಂಡಿದ್ದರು. ಅದೇ ಪಾರ್ಟಿಯಲ್ಲಿ ಶಾಸಕರೂ ಕಾಣಿಸಿಕೊಂಡಿದ್ದರೆಂಬ ಮಾಹಿತಿ ಇದೆ. ಶಾಸಕರು ಹಾಗೂ ಆರೋಪಿಗಳ ನಡುವಿನ ಸಂಬಂಧದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ರಿಯಾ ಚಕ್ರವರ್ತಿಯನ್ನು ಬಂಧನ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ‍್ರಕರಣಕ್ಕೂ ಡ್ರಗ್ಸ್ ಜಾಲದ ನಂಟಿನ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯನ್ನು ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ)ಮಂಗಳವಾರ ಬಂಧಿಸಿದೆ.

ಪ್ರಕರಣದಲ್ಲಿ ರಿಯಾ ಅವರನ್ನು ಮೂರು ದಿನಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

28 ವರ್ಷದ ರಿಯಾ ಈ ಹಿಂದೆ ತಾನು ಡ್ರಗ್ಸ್ ಸೇವಿಸಿಲ್ಲ ಎಂದು ನಿರಾಕರಿಸಿದ್ದರು. ಇದೇ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ರಿಯಾಳ ಸಹೋದರ ಶೋವಿಕ್ ಚಕ್ರವರ್ತಿಯನ್ನು ಕಳೆದ ವಾರ ಬಂಧಿಸಲಾಗಿತ್ತು.

ಖನ್ನಾ ಮನೆಯಲ್ಲೂ ಗಾಂಜಾ ಪತ್ತೆ

ಪ್ರಮುಖ ಆರೋಪಿ ದೆಹಲಿಯ ವಿರೇನ್ ಖನ್ನಾ ವಾಸವಿದ್ದ ಶಾಂತಿನಗರದ ಮನೆ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ದಾಳಿ ಮಾಡಿದ್ದು, ಗಾಂಜಾ ಹಾಗೂ ಅದನ್ನು ಸೇದಲು ಬಳಸುವ 3 ಸಾಧನಗಳು ಪತ್ತೆಯಾಗಿವೆ.‘ಪೆನ್
ಡ್ರೈವ್, ಲ್ಯಾಪ್‌ಟಾಪ್, ಮೂರು ಹಾರ್ಡ್‌ಡಿಸ್ಕ್, ಪೊಲೀಸ್, ಸೈನಿಕರ ಸಮವಸ್ತ್ರ
ಗಳು ಮನೆಯಲ್ಲಿ ದೊರಕಿವೆ. ನಕಲಿ ಬ್ಯಾಜ್‌ಗಳು, ಸ್ಟಾರ್‌ಗಳು, ಬೆಲ್ಟ್‌ಗಳು ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.