‘ನಾನು ಆರೋಗ್ಯವಾಗಿದ್ದೇನೆ, ಚೆನ್ನಾಗಿದ್ದೇನೆ’ ಎನ್ನುವ ಮೂಲಕ ತಮ್ಮ ಬಗ್ಗೆ ಹರಡಿರುವ ವದಂತಿಗಳಿಗೆ ನಟಿ ಶಕೀಲಾ ತೆರೆ ಎಳೆದಿದ್ದಾರೆ.

ಶಕೀಲಾ ಅವರು ಸ್ಪಷ್ಟನೆ ನೀಡಿ ಬಿಡುಗಡೆ ಮಾಡಿರುವ ವಿಡಿಯೊ ತುಣುಕನ್ನು ಸಿನಿಮಾ ಉದ್ಯಮಿ ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಶಕೀಲಾ. ನಾನು ಮೃತಪಟ್ಟಿದ್ದೇನೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ನಿನ್ನೆ ಗಮನಕ್ಕೆ ಬಂತು. ಹಾಗೇನೂ ಆಗಿಲ್ಲ. ನಾನಿಲ್ಲಿ ಆರೋಗ್ಯವಾಗಿ ಮತ್ತು ಬಹಳ ಸಂತೋಷದಿಂದ ಇದ್ದೇನೆ. ನನ್ನ ಬಗ್ಗೆ ನೀವೆಲ್ಲ ವಹಿಸಿದ ಕಾಳಜಿಗೆ ಧನ್ಯವಾದಗಳು. ಈ ಕುರಿತು ನನಗೆ ಸಂತಸವಿದೆ. ಯಾರೋ ಕೆಟ್ಟ ಸುದ್ದಿ ಹರಡಿದ್ದರು. ಅದರಿಂದಾಗಿ ನನಗೆ ಅನೇಕ ದೂರವಾಣಿ ಕರೆಗಳು ಬರುತ್ತಿವೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ಆ ಕೆಟ್ಟ ಸುದ್ದಿ ಹಬ್ಬಿಸಿದವರಿಗೂ ಧನ್ಯವಾದ. ಯಾಕೆಂದರೆ ಆ ಮೂಲಕ ನೀವು ನನ್ನತ್ತ ಗಮನಹರಿಸುವಂತೆ ಅವರು ಮಾಡಿದರು. ಮತ್ತೊಮ್ಮೆ ಧನ್ಯವಾದಗಳು’ ಎಂದು ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.